ರಾಜಾಹುಲಿ ಯಶ್ ಡ್ಯಾನ್ಸ್‍ನಲ್ಲೂ ಎಕ್ಸ್‍ಪರ್ಟ್. ಅವರ ಮಗ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಡ್ಯಾನ್ಸ್ ಶುರು ಹಚ್ಚಿಕೊಂಡಿದ್ದಾನೆ. ಮಗನ ಡ್ಯಾನ್ಸ್‍ನ್ನು ಸಖತ್ತಾಗಿ ಸಪೋರ್ಟ್ ಮಾಡಿರೋದು ಅಪ್ಪ ಯಶ್.
ಯಶ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಪುಟ್ಟದೊಂದು ವಿಡಿಯೋ ಬಿಟ್ಟಿದ್ದಾರೆ. ಆ ವಿಡಿಯೋದಲ್ಲಿ ಯಶ್ ಮಗ ಹಾಡಿಗೆ ಬೊಂಬಾಟ್ ಆಗಿ ಕುಣಿಯೋ ದೃಶ್ಯವಿದೆ. ಕಮಾನ್ ಕೆಂಚು.. ಅದೂ ಮಗನೇ.. ಕಮಾನ್ ಡ್ಯಾನ್ಸ್.. ಗುಡ್ ಕಂದ.. ಅನ್ನೋ ಯಶ್ ಮಾತುಗಳು, ವಿಷಲ್ಲು ಇಷ್ಟವಾಗುತ್ತದೆ. ಆದರೆ.. ಎಲ್ಲಕ್ಕಿಂತ ಇಷ್ಟವಾಗೋದು ಮ್ಯೂಸಿಕ್ಕು ಕೇಳಿದೊಡನೆ ಹೆಜ್ಜೆ ಹಾಕುವ ಯಶ್ ಮಗನ ಹುಮ್ಮಸ್ಸು.
ಯಶ್ ಮಗನಿಗೆ ಇನ್ನೂ ನಾಮಕರಣ ಆಗಿಲ್ಲ. ಸದ್ಯಕ್ಕೆ ಕೊರೊನಾ ಇರೋ ಕಾರಣಕ್ಕೆ ನಾಮಕರಣವೂ ಸದ್ಯಕ್ಕೆ ಇದ್ದಂತಿಲ್ಲ. ಆದರೆ.. ಯಶ್ ಮಗ ಈಗ ಹಾಡಿಗೆ ಹೆಜ್ಜೆ ಹಾಕುವಷ್ಟು ದೊಡ್ಡವನಾಗಿದ್ದಾನೆ.