ಲವ್ ಮಾಕ್‍ಟೇಲ್, ಕೊರೊನಾ ಲಾಕ್‍ಡೌನ್ ಆರಂಭಕ್ಕೂ ಮೊದಲು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದ್ದ ಚಿತ್ರ. ನಂತರ ಒಟಿಟಿ ಪ್ಲಾಟ್‍ಫಾರಂನಲ್ಲಿ ಸಂಭ್ರಮದ ಅಲೆ ಎಬ್ಬಿಸಿದ ಕ್ಯೂಟ್ ಲವ್ ಸ್ಟೋರಿ. ಡಾರ್ಲಿಂಗ್ ಕೃಷ್ಣ ಫಸ್ಟ್ ಟೈಂ ಡೈರೆಕ್ಷನ್‍ನಲ್ಲಿಯೇ ಲವ್ಲೀ ಹಿಟ್ ಕೊಟ್ಟಿದ್ದರು. ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ರಿಯಲ್ ಲವ್ ಸ್ಟೋರಿಯೂ ಜೊತೆಯಾಗಿ ಇಡೀ ಸಿನಿಮಾ ಲವ್ಲಿ ಜರ್ನಿಯಂತೆ ಭಾಸವಾಗಿತ್ತು. ಪ್ರೇಕ್ಷಕರ ಎದೆಗೆ ನಿಧಾನವಾಗಿ ಇಳಿಯುವ ಕಥೆ ಅಂತ್ಯದಲ್ಲಿ ಭಾವುಕರನ್ನಾಗಿಸಿತ್ತು. ಈಗ ಆ ಚಿತ್ರ ತೆಲುಗುಗೆ ಹೋಗುತ್ತಿದೆ.
ತೆಲುಗಿನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಿದ್ದು, ನಿಧಿಮಾ ಪಾತ್ರ ಮಾಡಲಿದ್ದಾರೆ. ಕೃಷ್ಣನ ಪಾತ್ರದಲ್ಲಿ ಸತ್ಯದೇವ್ ನಟಿಸುತ್ತಿದ್ದಾರೆ. ಮೈನಾ ನಾಗಶೇಖರ್ ತೆಲುಗಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ಕೆಲಸ ವಹಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಭಾವನಾ ರವಿ ಮತ್ತು ನಾಗಶೇಖರ್ ನಿರ್ಮಾಪಕರು. ಅಲ್ಲಿಯೂ ಚಿತ್ರದ ಟೈಟಲ್ ಲವ್ ಮಾಕ್‍ಟೇಲ್.