ಮೇಕಪ್ ಸೀನ ಎಂದೇ ಫೇಮಸ್ ಆಗಿದ್ದ ಶ್ರೀನಿವಾಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದರ್ಶನ್ ಬಳಿ ಸುಮಾರು 20 ವರ್ಷಗಳಿಂದ ಜೊತೆಯಲ್ಲಿದ್ದ ಶ್ರೀನಿವಾಸ್ ನಿಧನಕ್ಕೆ ದರ್ಶನ್ ಕಂಬನಿ ಮಿಡಿದಿದ್ದಾರೆ.
ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ದರ್ಶನ್ ಜೊತೆಯಲ್ಲಿದ್ದ ಶ್ರೀನಿವಾಸ್ ಲಗ್ಗೆರೆಯ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಆರಂಭದ ಕಷ್ಟಕಾಲದಲ್ಲಿ ಜೊತೆಯಲ್ಲಿದ್ದವರ ಮೇಲೆ ದರ್ಶನ್‍ಗೆ ಪ್ರೀತಿ ಸ್ವಲ್ಪ ಜಾಸ್ತಿನೇ. ದರ್ಶನ್ ಅವರ ನೆಚ್ಚಿನ ಮೇಕಪ್ ಮ್ಯಾನ್ ಆಗಿದ್ದ ಶ್ರೀನಿವಾಸ್ ಮನೆಗೆ ಭೇಟಿ ನೀಡಿದ ದರ್ಶನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.