ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ನಟಿಸಬೇಕು ಅನ್ನೋದು ಅಭಿಮಾನಿಗಳ ಕನಸು. ಅವರಿಬ್ಬರೂ ಒಂದೇ ಚಿತ್ರದಲ್ಲಿ ನಟಿಸಿರೋದು ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ. ಕಣ್ಣಪ್ಪನಾಗಿ ಶಿವಣ್ಣ ನಟಿಸಿದ್ದರೆ, ಬಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಪುನೀತ್. ಮತ್ತೊಮ್ಮೆ ಇಬ್ಬರೂ ಒಟ್ಟಿಗೇ ನಟಿಸಲಿ ಎನ್ನೋ ಅಭಿಮಾನಿಗಳ ಆ ಕನಸು ಈಡೇರುವ ಕಾಲ ಹತ್ತಿರ ಬಂದುಬಿಡ್ತಾ..? ಸಂತೋಷ್ ಆನಂದ ರಾಮ್ ಅಂಥಾದ್ದೊಂದು ಥ್ರಿಲ್ ಕೊಟ್ಟಿದ್ದಾರೆ.
ಪವರ್ ಸ್ಟಾರ್ ಜೊತೆ ಶಿವಣ್ಣ ರಾಕ್ಸ್. ಯುವರತ್ನದ ಸೆನ್ಸೇಷನಲ್ ಸೀನ್. ನಿಮ್ಮ ಹಾಗೆ ನಾನೂ ಅಭಿಮಾನಿಯಾಗಿ ನೋಡೋಕೆ ಕಾಯುತ್ತಿರುವೆ ಎಂದಿದ್ದಾರೆ ಸಂತೋಷ್ ಆನಂದ ರಾಮ್.
ಹಾಗಂತ ಯುವರತ್ನ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್‍ನಲ್ಲಾದರೂ ನಟಿಸಿರುತ್ತಾರೆ ಎಂದೆಲ್ಲ ಆಸೆ ಇಟ್ಟುಕೊಳ್ಳಬೇಡಿ. ಯಾಕಂದ್ರೆ ಅಲ್ಲಿರೋದು ನಿರ್ದೇಶಕ ಸಂತೋಷ್ ಆನಂದರಾಮ್. ಅವರಿಗೆ ಆಕಾಶದ ಚಂದಮಾಮನನ್ನು ಅಂಗೈಯ್ಯಲ್ಲೇ ಅದ್ಭುತವಾಗಿ ತೋರಿಸುವ ಕಲೆ ಚೆನ್ನಾಗಿ ಗೊತ್ತು.