ಶಿವಣ್ಣ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಬಂದಿದೆ ಭಜರಂಗಿ 2 ಟೀಸರ್. 58ನೇ ಹುಟ್ಟುಹಬ್ಬಕ್ಕೆ ಬಂದಿರೋ ಟೀಸರ್ ಮೈನವಿರೇಳಿಸುವಂತಿದೆ. ಶಿವಣ್ಣನ ಹೊಸ ಲುಕ್ಕು, ಕಾಡುವಾಸಿಗಳ ನಾಯಕಿಯಾಗಿ ಭಾವನಾ, ಮಂತ್ರವಾದಿಯ ಗೆಟಪ್ಪಿನಲ್ಲಿ ಶೃತಿ, ಖಳನಾಯಕನಾಗಿ ಭಜರಂಗಿ ಲೋಕಿ.. ಒಬ್ಬರಿಗಿಂತ ಒಬ್ಬರು.. ಜೊತೆಗೆ ಅದ್ಧೂರಿ ಎನಿಸುವ ಸೆಟ್, ಹಿನ್ನೆಲೆ ಸಂಗೀತ.. ಎಲ್ಲವೂ ಒಂದಕ್ಕೊಂದು ತಾಳಮೇಳದಂತೆ ಕೂಡಿಕೊಂಡಿವೆ.
ಡೈರೆಕ್ಟರ್ ಹರ್ಷ ಮತ್ತೊಮ್ಮೆ ಮ್ಯಾಜಿಕ್ ಸೃಷ್ಟಿಸುವ ಸೂಚನೆ ಕೊಟ್ಟಿದ್ದಾರೆ. ಜಯಣ್ಣ ಕಂಬೈನ್ಸ್‍ನ ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತವೂ ಮೈ ಝುಮ್ ಎನ್ನಿಸುವಂತಿದೆ. ರವಿ ಕಲಾ ನಿರ್ದೇಶನದ ಸೆಟ್ಟುಗಳು ಬೆರಗು ಹುಟ್ಟಿಸುತ್ತಿವೆ.