ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಕೊರೊನಾ ಕಾಟ ವಿಪರೀತವಾಗಿದೆ. ಕೋವಿಡ್ 19 ಶುರುವಾದಾಗ 25 ದಿನಗಳ ಶೂಟಿಂಗ್ ಮುಂದೂಡಿತ್ತು ಚಿತ್ರತಂಡ. ಈಗ ಶೂಟಿಂಗ್‍ಗೆ ಅವಕಾಶ ಕೊಟ್ಟ ನಂತರ ಮತ್ತೊಮ್ಮೆ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ಸೆಟ್ ಹಾಕಿತ್ತು. ಸೆಟ್ ವರ್ಕ್ ಮುಗಿಯುವ ಹೊತ್ತಿಗೆ ಸುತ್ತಮುತ್ತ ಕೋವಿಡ್ 19 ವಿಸ್ಫೋಟವಾಗಿ ಹೋಯ್ತು. ಹೀಗಾಗಿ ಮತ್ತೆ ಚಿತ್ರೀಕರಣವನ್ನು ಮುಂದಕ್ಕೆ ಹಾಕಿದೆ ಚಿತ್ರತಂಡ.
ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಕೆಜಿಎಫ್ ಚಾಪ್ಟರ್ 2, ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಅಕ್ಟೋಬರ್‍ನಲ್ಲಿ ರಿಲೀಸ್ ಎಂದು ಘೋಷಿಸಿಕೊಂಡಿದ್ದ ಕೆಜಿಎಫ್ 2ಗೆ ಪದೇ ಪದೇ ವಿಘ್ನಗಳೆದುರಾಗುತ್ತಿವೆ. ಇದು ಹೀಗೆಯೇ ಮುಂದುವರಿದರೆ ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಕಡಿಮೆ.