` ಚಿತ್ರ ನಟ, ಕಿರುತೆರೆ ನಟ ಮಂಡ್ಯದ ಕಲಾವಿದ ಆತ್ಮಹತ್ಯೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actor susheel commits suicide
Susheel Gowda

ಏನಾಗುತ್ತಿದೆ ಚಿತ್ರರಂಗದಲ್ಲಿ ಅರ್ಥವಾಗದ ಪರಿಸ್ಥಿತಿ. ಸಲಗ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಸಹನಟ ಸುಶೀಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಶೀಲ್ ಚಿತ್ರ ನಟನಷ್ಟೇ ಆಗಿರಲಿಲ್ಲ. ಹಲವು ಕಿರುತೆರೆ ಧಾರಾವಾಹಿಗಳಲ್ಲೂ ನಟಿಸುತ್ತಿದ್ದರು. ಲೋಟಸ್ ಫಿಟ್‍ನೆಸ್ ಸೆಂಟರ್ ನಡೆಸುತ್ತಿದ್ದ ಸುಶೀಲ್, ಜಿಮ್ ಟ್ರೈನರ್ ಕೂಡಾ ಆಗಿದ್ದರು. ಅದ್ಭುತ ಎನ್ನಿಸುವಂತಹ ದೇಹದಾಢ್ರ್ಯವೂ ಇತ್ತು. ಆತ ಮುಂದೊಂದು ದಿನ ಹೀರೋ ಆಗುತ್ತಾನೆ ಎಂದುಕೊಂಡಿದ್ದೆ ಎಂದಿದ್ದಾರೆ ಸಲಗ ಚಿತ್ರದ ನಿರ್ದೇಶಕರೂ ಆಗಿರುವ ನಟ ದುನಿಯಾ ವಿಜಯ್.

ಮಂಡ್ಯದ ವಿವಿ ಬಡಾವಣೆ ನಿವಾಸಿಯಾಗಿದ್ದ ಸುಶೀಲ್, ಜಿಮ್ ಮತ್ತು ಸಿನಿಮಾ ಎರಡೂ ಇಲ್ಲದ ಕಾರಣ ಊರಿಗೆ ಹೋಗಿದ್ದರು. ಇಡವಾಳ ಗ್ರಾಮದ ತಮ್ಮ ಗೆಳೆಯನ ಮನೆಗೆ ಹೋಗಿದ್ದ ಸುಶೀಲ್, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery