` ಶಿವಣ್ಣ ಹುಟ್ಟುಹಬ್ಬಕ್ಕೆ ಕಿಚ್ಚನ ಕಾಣಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep releases shivanna's birthday dp
Sudeep's Gift To Shivvanna For His Birthday

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 58ನೇ ಹುಟ್ಟುಹಬ್ಬಕ್ಕೆ ಹತ್ತಿರದಲ್ಲಿದ್ದಾರೆ. ಜುಲೈ 12ಕ್ಕೆ ಬರ್ತ್ ಡೇ. ಈಗಾಗಲೇ ಶಿವಣ್ಣ ಅಭಿಮಾನಿಗಳಿಗೆ ಮನೆಯ ಹತ್ತಿರ ಬರಬೇಡಿ. ಕೊರೊನಾ ಮುಗಿದ ಮೇಲೆ ನಾನೇ ಬರುತ್ತೇನೆ. ಆ ದಿನ ಮನೆಯಲ್ಲಿ ಇರಲ್ಲ. ನಿಮ್ಮ ಆರೋಗ್ಯವೇ ಮುಖ್ಯ ಎಂದು ಹೇಳಿಬಿಟ್ಟಿದ್ದಾರೆ.

ಮನೆ ಹತ್ತಿರ ಹೋಗಲಾರದಿದ್ದರೆ ಏನಂತೆ.. ಮೊಬೈಲ್.. ಇಂಟರ್‍ನೆಟ್ ಇರೋವಾಗ.. ಇದ್ದ ಜಾಗದಲ್ಲೇ ಶಂಭೋ ಶಿವ ಎಂದಿದ್ದಾರೆ ಅಭಿಮಾನಿಗಳು. ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವುದು ಕಿಚ್ಚ ಸುದೀಪ್.

ಶಿವಣ್ಣ ಹುಟ್ಟಹಬ್ಬಕ್ಕೆ ಕಾಮನ್ ಡಿಪಿ ಮಾಡಿರುವ ಶಿವಣ್ಣ ಅಭಿಮಾನಿಗಳು, ಇದನ್ನು ಬಿಡುಗಡೆ ಮಾಡಿ ಎಂದು ಕಿಚ್ಚ ಸುದೀಪ್ ಅವರಲ್ಲಿ ಮನವಿ ಮಾಡಿದ್ದಾರೆ. ಶಿವಣ್ಣ ಫ್ಯಾನ್ಸ್ ಪ್ರೀತಿಗೆ ಮಣಿದಿರುವ ಕಿಚ್ಚ ಸುದೀಪ್, ಮೊಬೈಲ್ ಕಾಮನ್ ಡಿಪಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery