` ಕೇಟರಿಂಗ್ ವೃತ್ತಿಗೆ ನಟ ಶಂಕರ್ ಅಶ್ವತ್ಥ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actor shankar ashwanth does catering business
Shankar Ashwath

ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರ ಪುತ್ರ, ಕಲಾವಿದ ಶಂಕರ್ ಅಶ್ವತ್ಥ್ ನಟನೆಯಲ್ಲಿ ಅವಕಾಶ ದೊರೆಯದೆ ಉಬರ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ವರ್ಷದ ಹಿಂದೆ ಬಂದಿತ್ತು. ಅದಾದ ಮೇಲೆ ದರ್ಶನ್ ಸೇರಿದಂತೆ ಕೆಲವರು ಶಂಕರ್ ಅಶ್ವತ್ಥ್ ಅವರನ್ನು ಕರೆದು ಅವಕಾಶ ಕೊಟ್ಟರು. ಶೂಟಿಂಗ್ ಇದ್ದರೆ ನಟನೆ, ಇಲ್ಲದಿದ್ದರೆ ಟ್ಯಾಕ್ಸಿ ಡ್ರೈವಿಂಗ್ ಎಂದುಕೊಂಡಿದ್ದ ಶಂಕರ್ ಅಶ್ವತ್ಥ್ ಅವರಿಗೆ ಕೋವಿಡ್ 19 ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಚೈನೀಸ್ ವೈರಸ್ ಹಾವಳಿಯಿಂದಾಗಿ ಉಬರ್ ಟ್ಯಾಕ್ಸಿಗೆ ಪ್ರಯಾಣಿಕರೂ ಬರದೆ ಕಂಗಾಲಾದ ಶಂಕರ್ ಅಶ್ವತ್ಥ್ ಈಗ ಕೇಟರಿಂಗ್ ಮಾಡುತ್ತಿದ್ದಾರೆ.

ಕೇಟರಿಂಗ್ ಶಂಕರ್ ಅಶ್ವತ್ಥ್ ಅವರಿಗೆ ಹೊಸ ವೃತ್ತಿಯೇನೂ ಅಲ್ಲ. ಶಂಕರ್ ಅಶ್ವತ್ಥ್ ಉಬರ್ ಟ್ಯಾಕ್ಸಿ ಚಾಲಕರಾಗಿದ್ದಾಗ, ಅವರ ಪತ್ನಿ ಕೇಟರಿಂಗ್ ಮಾಡುತ್ತಿದ್ದರು. ಈಗ ಪತ್ನಿಯ ಕೆಲಸಕ್ಕೆ ಕೈ ಜೋಡಿಸಿರುವ ಶಂಕರ್ ಅಶ್ವತ್ಥ್, ಪತ್ನಿಯ ವೃತ್ತಿಗೆ ಜೊತೆಯಾಗಿದ್ದಾರೆ. ಕೈರುಚಿ ಸವಿದ ನೂರಾರು ಜನ ಶಂಕರ್ ಅಶ್ವತ್ಥ್ ಅವರಿಗೆ ಕರೆ ಮಾಡಿ ದೊಡ್ಡ ಮಟ್ಟದಲ್ಲಿ ಆರ್ಡರ್ ಮಾಡುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery