` ಯಶ್ ಮನೆಯಲ್ಲಿ ಗೀತಾ ಹುಟ್ಟುಹಬ್ಬ : ಈ ಗೀತಾ ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika pandit introduces her family member
Radhika Pandit, Geetha

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಗೀತಾ ಅವರ ಹುಟ್ಟುಹಬ್ಬ. ಅರೆ.. ಯಾರಿದು ಗೀತಾ ಎಂದು ತಲೆ ಕೆರೆದುಕೊಳ್ಳಬೇಡಿ. ಈ ಗೀತಾ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಸುಮಾರು 8 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆ. 8 ವರ್ಷದಿಂದ ಜೊತೆಯಲ್ಲಿರುವ ಇವರು ಈಗ ನಮ್ಮ ಕುಟುಂಬವೇ ಆಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ ಬಗ್ಗೆ ಇನ್ನುಷ್ಟು ಹೆಚ್ಚಿನ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ ರಾಧಿಕಾ ಪಂಡಿತ್.

ಗೀತಾ ಅವರ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿರುವ ರಾಧಿಕಾ ಪಂಡಿತ್, ನಿಮ್ಮ ಮನೆಯ ಕೆಲಸದವರನ್ನು ನಿರ್ಲಕ್ಷಿಸಬೇಡಿ. ಇನ್ನಷ್ಟು ಕಾಳಜಿ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.