` ಮಿಮಿಕ್ರಿ ರಾಜಗೋಪಾಲ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mimickery rajgopal no more
Mimickery Rajgopal

ಕಳೆದ 4 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಕಲಾವಿದ ಮಿಮಿಕ್ರಿ ರಾಜಗೋಪಾಲ್ ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೊರೊನಾ ಶುರುವಾದಾಗಿನಿಂತ ಆಗುತ್ತಿರುವ ಸರಣಿ ಸಾವುಗಳಿಗೆ ಮಿಮಿಕ್ರಿ ರಾಜಗೋಪಾಲ್ ನಿಧನ ಹೊಸ ಸೇರ್ಪಡೆ. ಕೆಂಗೇರಿಯಲ್ಲಿರುವ ತಮ್ಮ ನಿವಾಸದಲ್ಲಿ ರಾಜಗೋಪಾಲ್ ಕೊನೆಯುಸಿರೆಳೆದಿದ್ದಾರೆ. ಕೆಂಗೇರಿ ಬಳಿ ಸರ್ಕಾರವೇ ನಿರ್ಮಿಸಿದ್ದ ಬಿಡಿಎ ವಸತಿಗೃಹದಲ್ಲಿ ವಾಸವಾಗಿದ್ದ ರಾಜಗೋಪಾಲ್, ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಮಿಮಿಕ್ರಿ ಮೂಲಕವೇ ಗುರುತಿಸಿಕೊಂಡಿದ್ದ ರಾಜಗೋಪಾಲ್ ಕಲ್ಪನಾ ಅವರ ವಾಯ್ಸ್‍ನ್ನು ಅದ್ಭುತವಾಗಿ ಅನುಕರಿಸುತ್ತಿದ್ದರು. ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್ ಸೇರಿದಂತೆ ಹಲವರ ಚಿತ್ರಗಳಲ್ಲಿ ನಟಿಸಿದ್ದ ಮಿಮಿಕ್ರಿ ರಾಜಗೋಪಾಲ್, ಸಾಯಿಪ್ರಕಾಶ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ, ಆರ್ಥಿಕವಾಗಿ ಪ್ರಬಲರಾಗಿಯೇನೂ ಇರಲಿಲ್ಲ.