ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ದಿನ ಮನೆಯ ಬಳಿ ಬರಬೇಡಿ. ದೂರದಿಂದಲೇ ಹಾರೈಸಿ. ಕೊರೊನಾ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆ ಮನವಿಯ ತೀವ್ರತೆ ಎಷ್ಟಿತ್ತೆಂದರೆ ಅಂದಿನಿಂದಲೇ ಟ್ವಿಟರ್‍ನಲ್ಲಿ ಗಣೇಶ್ ಹುಟ್ಟುಬ್ಬ ಟ್ರೆಂಡ್ ಆಗಿ ಹೋಯ್ತು. ಸ್ವತಃ ಸುದೀಪ್ ಕನ್‍ಫ್ಯೂಸ್ ಆಗಿ ಗಣೇಶ್ ಅವರಿಗೆ 3 ದಿನ ಮೊದಲೇ ಶುಭ ಕೋರಿದ್ದರು. ಇವತ್ತು ಹುಟ್ಟುಹಬ್ಬ.
ಗಣೇಶ್ ಅವರಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶುಭ ಕೋರಿದ್ದಾರೆ. ಸಖತ್ ಸಿನಿಮಾ ಮಾಡುತ್ತಿರೋ ಸಿಂಪಲ್ ಸುನಿ, ಗಣೇಶ್ ಅವರಿಗಾಗಿ ಜ್ಯೂಡಾ ಸ್ಯಾಂಡಿಯವರಿಂದ ಒಂದು ರ್ಯಾಪ್ ಸಾಂಗ್ ಮಾಡಿಸಿ ಶುಭ ಕೋರಿದ್ದಾರೆ.