ನಿರ್ದೇಶಕ ಆರ್.ಚಂದ್ರು, ಫುಲ್ ಟೈಂ ನಿರ್ದೇಶಕರಾದರೂ, ಹವ್ಯಾಸಿ ಕೃಷಿಕ. ಸಿನಿಮಾದಿಂದ ಬಂದ ಲಾಭವನ್ನು ಕೃಷಿಗೆ ಸುರಿದಿದ್ದಾರೆ ಚಂದ್ರು. ಚಿಕ್ಕಬಳ್ಳಾಪುರದ ಕೇಶಾವರದಲ್ಲಿ ಚೆಂದದ ತೋಟ ಮಾಡಿದ್ದಾರೆ.
ಬಿಡುವಿದ್ದಾಗಲೆಲ್ಲ ಜಮೀನಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಚಂದ್ರು ತೋಟಕ್ಕೆ ಇತ್ತೀಚೆಗೆ ಶಿವಣ್ಣ ಮತ್ತು ಗೀತಾ ಭೇಟಿ ಕೊಟ್ಟಿದ್ದರು. ಸ್ವರ್ಗ.. ಸ್ವರ್ಗ.. ಶಿವಣ್ಣನ ಬಾಯಲ್ಲಿ ಬಂದ ಉದ್ಘಾರ ಇದೇ.
ಏಕೆಂದರೆ ಚಂದ್ರು ರೆಡಿಮೇಡ್ ತೋಟ ಖರೀದಿಸದೆ ತಾವೇ ತೋಟ ಮಾಡುತ್ತಿದ್ದಾರೆ. ಗುಡಿಸಲು ಕಟ್ಟಿದ್ದಾರೆ. ಲಾಕ್ ಡೌನ್ ತೆರವಾದ ನಂತರ ಚಿಕ್ಕಬಳ್ಳಾಪುರದ ದೇವಸ್ಥಾನಗಳಿಗೆ ಹೋಗಿದ್ದ ಶಿವಣ್ಣ ದಂಪತಿ, ಚಂದ್ರು ತೋಟಕ್ಕೂ ಹೋಗಿದ್ದಾರೆ. ಚಂದ್ರು ತಮ್ಮ 20 ಎಕರೆ ಜಮೀನಿನಲ್ಲಿ ದ್ರಾಕ್ಷಿ, ಕ್ಯಾಪ್ಸಿಕಮ್, ರೇಷ್ಮೆ, ಮೆಣಸಿನ ಕಾಯಿ ಬೆಳೆಯುತ್ತಿದ್ದಾರೆ.