` ಗಾಂಧಿನಗರವನ್ನು ರಾತ್ರಿಯೆಲ್ಲ ತಲ್ಲಣಗೊಳಿಸಿದ್ದು ಎಸ್.ಜಾನಕಿಯವರ ಈ ಸುದ್ದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rumors regarding s janaki;s health
S Janaki

ಎಸ್.ಜಾನಕಿ, ಗಾನಕೋಗಿಲೆ.. ಕನ್ನಡಿಗರು ಹಾಗೂ ಕಿರಿಯ ಗಾಯಕರ ಪಾಲಿಗೆ ಜಾನಕಮ್ಮ. ತೆಲುಗಿನವರಾದರೂ ಕನ್ನಡಿಗರ ಹೃದಯದಲ್ಲಿ ಕನ್ನಡತಿಯೇ ಆಗಿರುವ ಎಸ್.ಜಾನಕಿ ನಿಧನರಾಗಿದ್ದಾರೆ ಎಂಬ ಸುದ್ದಿ ರಾತ್ರಿಯೆಲ್ಲ ಗಾಂಧಿನಗರವನ್ನು ತಲ್ಲಣಗೊಳಿಸಿತ್ತು. ಹೌದಾ.. ನಿಜಾನಾ.. ಎಂದು ಜಾನಕಿಯವರ ಕುಟುಂಬಕ್ಕೆ ಹತ್ತಿರದಲ್ಲಿರುವರಿಗೆ ಫೋನ್ ಕರೆಗಳು ಶುರುವಾದವು.

ಕೊನೆಗೆ ಜಾನಕಿಯವರ ಪುತ್ರ ಮುರಳಿ ಕೃಷ್ಣ, ಅಮ್ಮ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಇತ್ತೀಚೆಗೆ ಸಣ್ಣದೊಂದು ಸರ್ಜರಿ ಮಾಡಿಸಿದ್ದೇವೆ. ಅವರು ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.

ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೂಡಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ `ಈಗ ತಾನೇ ಜಾನಕಿ ಅಮ್ಮನ ಜೊತೆ ಮಾತನಾಡಿದೆ. ಅವರು ಆರೋಗ್ಯವಾಗಿದ್ದಾರೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಸುಮ್ಮನಿರಿ. ಗಾಳಿಸುದ್ದಿ ಹಬ್ಬಿಸಬೇಡಿ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ' ಎಂದು ಭಾವುಕವಾಗಿಯೇ ಕೇಳಿಕೊಂಡರು.

ಹೌದು, ಜಾನಕಿ ಅಮ್ಮ ಆರೋಗ್ಯವಾಗಿದ್ದಾರೆ. ಆಗಿರೋದು ಪುಟ್ಟದೊಂದು ಸರ್ಜರಿ. ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery