ಶಿವರಾಜ್ ಕುಮಾರ್ ಮತ್ತು ಹರ್ಷ ಇಬ್ಬರದ್ದೂ ಸಕ್ಸಸ್‍ಫುಲ್ ಜೋಡಿ. ಈ ಜೋಡಿಯ ಮೊದಲ ಸಿನಿಮಾ ಭಜರಂಗಿ ಬ್ಲಾಕ್ ಬಸ್ಟರ್ ಹಿಟ್ ಆದರೆ, 2ನೇ ಸಿನಿಮಾ ವಜ್ರಕಾಯ ಸೂಪರ್ ಹಿಟ್. 3ನೇ ಚಿತ್ರ ಭಜರಂಗಿ 2 ಅಂತಿಮ ಹಂತದಲ್ಲಿದೆ. ಲಾಕ್ ಡೌನ್ ಮತ್ತು ಆ ಎರಡು ಅನಾಹುತಗಳು ನಡೆಯದೇ ಹೋಗಿದ್ದರೆ, ಇಷ್ಟು ಹೊತ್ತಿಗೆ ಚಿತ್ರ ಥಿಯೇಟರುಗಳಲ್ಲಿ ಸದ್ದು ಮಾಡಿರುತ್ತಿತ್ತು. ಇದರ ನಡುವೆಯೇ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ.
ಕಿಲ್ಲಿಂಗ್ ವೀರಪ್ಪನ್ ಚಿತ್ರದ ನಿರ್ಮಾಪಕರು ಮತ್ತೊಮ್ಮೆ ಶಿವಣ್ಣಗಾಗಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಡೈರೆಕ್ಟರ್ ಹರ್ಷ. ಕಥೆಗೆ ಶಿವರಾಜ್ ಕುಮಾರ್ ಓಕೆ ಎಂದು ಹೇಳಿ ಆಗಿದೆ. ಕೆಲವೇ ದಿನಗಳಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ.