ಕನ್ನಡದ ಶ್ರೇಷ್ಟ ಕಾವ್ಯಕೃತಿಗಳಲ್ಲೊಂದಾದ ಯಶೋಧರ ಚರಿತೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕಾವ್ಯ ಕೃತಿಯನ್ನಾಧರಿಸಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಅಮೃತಮತಿ ಸಿನಿಮಾ, ಈಗ ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಆನ್‍ಲೈನ್ ಸ್ಕ್ರೀನಿಂಗ್ ಮೂಲಕ, ಜುಲೈ 22ರಿಂದ ಆಗಸ್ಟ್ 5ರವರೆಗೆ ನಡೆಯುವ ಫಿಲಂ ಫೆಸ್ಟಿವಲ್ ಇದು. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಶಾಸಕ ಪುಟ್ಟಣ್ಣ ನಿರ್ಮಿಸಿರುವ ಚಿತ್ರವಿದು. ಹರಿಪ್ರಿಯಾ ನಾಯಕಿಯಾಗಿರುವ ಚಿತ್ರಕ್ಕೆ ಬರಗೂರು ನಿರ್ದೇಶನವಿದೆ. ಈಗಾಗಲೇ ಹರಿಪ್ರಿಯಾ ಇನ್ನೊಂದು ಫಿಲಂ ಫೆಸ್ಟಿವಲ್‍ನಲ್ಲಿ ಶ್ರೇಷ್ಟ ನಟಿ ಪ್ರಶಸ್ತಿ ಗೆದ್ದಿರುವ ಚಿತ್ರವಿದು. ಹರಿಪ್ರಿಯಾ ಅಮೃತಮತಿಯಾಗಿ, ಕಿಶೋರ್ ಯಶೋಧರನಾಗಿ ನಟಿಸಿರುವ ಚಿತ್ರದಲ್ಲಿ ಅಷ್ಟಾವಂಕನಾಗಿ ನಟಿಸಿರುವುದು ತಿಲಕ್.