ಕೊರೊನಾ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆಯೇ ಸಿನಿಮಾ, ಸೀರಿಯಲ್`ಗಳ ಚಿತ್ರೀಕರಣಕ್ಕೂ ಅವಕಾಶ ಸಿಕ್ಕಿದೆ. ಎಲ್ಲ ಕೋವಿಡ್ -19 ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಶೂಟಿಂಗ್ ನಡೆಯುತ್ತಿದೆ. ಇದರ ನಡುವೆ ಶಾಕಿಂಗ್ ನ್ಯೂಸ್ ಬಂದಿರೋದು ಹೈದರಾಬಾದ್‍ನಿಂದ.
ತೆಲುಗು ಟಿವಿ ಸೀರಿಯಲ್ ನಟ ಪ್ರಭಾಕರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ಇಡೀ ಶೂಟಿಂಗ್ ಯುನಿಟ್ ಟೆನ್ಷನ್‍ನಲ್ಲಿದೆ. ತೆಲುಗು ಟಿವಿ ಲೋಕದಲ್ಲಿ ಪ್ರಭಾಕರ್ ಅವರದ್ದು ದೊಡ್ಡ ಹೆಸರು. ಅವರಿಗೆ ಈಗ ಪಾಸಿಟಿವ್ ಎನ್ನುವ ವರದಿ, ಶೋ ನಡೆಸಿಕೊಡುವ ತಂಡವನ್ನಷ್ಟೇ ಅಲ್ಲ, ಚಿತ್ರೀಕರಣ ಸ್ಪಾಟ್‍ನಲ್ಲಿರುವ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೀರಿಯಲ್ ನಿರ್ಮಾಪಕರು ತಕ್ಷಣವೇ ಪ್ರಭಾಕರ್ ಅವರನ್ನು ಕ್ವಾರಂಟೈನ್‍ಗೆ ಕಳಿಸಿದ್ದಾರೆ. ಈಗ ಇಡೀ ತಂಡ ಹೋಮ್ ಕ್ವಾರಂಟೈನ್‍ಗೆ ತೆರಳಿದೆ. ಪ್ರಭಾಕರ್ ಕಾಂಟ್ಯಾಕ್ಟ್ ಡೀಟೈಲ್ಸ್ ಹುಡುಕಾಟದಲ್ಲಿದ್ದಾರೆ ಅಧಿಕಾರಿಗಳು.