ಜಂಟಲ್‍ಮ್ಯಾನ್ ಸಿನಿಮಾ ರಿಲೀಸ್ ಆದ ಹೊತ್ತಲ್ಲಿ ಹಲವರು ಹಲವು ರೀತಿಯ ಕಾಟ ಕೊಟ್ಟರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಕಥೆ ತುಂಬಾ ಸ್ಪೆಷಲ್ ಎನಿಸಿತ್ತು. ನಿರೂಪಣೆ ವಿಭಿನ್ನವಾಗಿತ್ತು. ಅಭಿನಯ, ಸಂಗೀತ ಎಲ್ಲವೂ ಚೆನ್ನಾಗಿದ್ದರೂ, ಚಿತ್ರ ಆವರೇಜ್ ಹಂತಕ್ಕಷ್ಟೇ ಹೋಯ್ತು. ಲಾಕ್ ಡೌನ್ ಮುಗಿದ ನಂತರ ಮತ್ತೊಮ್ಮೆ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದ ನಿರ್ಮಾಪಕರು, ಕೊನೆಗೆ ಆ ನಿರ್ಧಾರ ಕೈಬಿಟ್ಟರು. ಕಾರಣ, ಥಿಯೇಟರ್ ಓಪನ್ ಆಗುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬ ಕಾರಣಕ್ಕೆ. ಕೊನೆಗೆ ಟಿವಿಯಲ್ಲಿಯೂ ಬಂದ ಚಿತ್ರಕ್ಕೆ ಈಗಲೂ ಕ್ರಿಮಿನಲ್ಸ್ ಕಾಟ ತಪ್ಪಿಲ್ಲ.
ಟಿವಿಯಲ್ಲಿ ಪ್ರಸಾರವಾದ ಚಿತ್ರವನ್ನು ಪೈರಸಿ ಕ್ರಿಮಿನಲ್ಸ್ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಹೀಗೆ ಸಿನಿಮಾವನ್ನು ಸೋಷಿಯಲ್ ಮೀಡಿಯಾಕ್ಕೆ ಬಿಡುವುದು ಅಪರಾಧ. ಹೀಗಾಗಿ ಚಿತ್ರತಂಡ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದೆ. ಅತ್ತ, ಟಿವಿ ಚಾನೆಲ್‍ನವರೂ ದೂರು ಕೊಡುತ್ತಿದ್ದಾರೆ. ಪೈರಸಿ ಕ್ರಿಮಿನಲ್ಸ್.. ಎಚ್ಚರ. ಇಂತಹ ಅಪರಾಧ ಮಾಡಬೇಡಿ. ಕಾನೂನು ಕಠಿಣವಾಗಿದೆ. ಯಾವುದೇ ಚಿತ್ರವನ್ನಾಗಲೀ ಪೈರಸಿ ಮಾಡಬೇಡಿ. ಇದು ಚಿತ್ರಲೋಕದ ಕಳಕಳಿಯ ಮನವಿಯೂ ಹೌದು.