ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜವೀರ ಮದಕರಿ ಚಿತ್ರದ ಚಿತ್ರೀಕರಣವೇ ಮುಂದಕ್ಕೆ ಹೋಯಿತು ಎಂದು ಬೇಸರದಲ್ಲಿರೋ ದರ್ಶನ್ ಅಭಿಮಾನಿಗಳಿಗೆ ಇನ್ನೊಂದು ಬೇಸರದ ಸುದ್ದಿ ಇದು. ಕೊರೊನಾ ಮುಗಿದ ತಕ್ಷಣ ರಿಲೀಸ್ ಆಗಲಿದೆ ಎನ್ನಲಾಗುತ್ತಿದ್ದ ರಾಬರ್ಟ್ ಚಿತ್ರ ಈ ವರ್ಷ ರಿಲೀಸ್ ಆಗುವುದೇ ಡೌಟ್.
ಕೊರೊನಾ ವ್ಯಾವಹಾರಿಕ ಜಗತ್ತನ್ನೇ ಬದಲಿಸಿಬಿಟ್ಟಿದೆ. ದೊಡ್ಡ ಬಜೆಟ್ ಸಿನಿಮಾ. ಆತುರವಾಗಿ ರಿಲೀಸ್ ಮಾಡೋದು ಬೇಡ. ಹೀಗಾಗಿ ಕೊರೊನಾ ವೈರಸ್ ಸಂಕಷ್ಟವೆಲ್ಲ ಮುಗಿದು, ಎಲ್ಲವೂ ಸಹಜ ಸ್ಥಿತಿಗೆ ಬಂದಮೇಲಷ್ಟೇ ಚಿತ್ರ ರಿಲೀಸ್ ಮಾಡುತ್ತೇವೆ ಎಂದು ಸುಳಿವು ಕೊಟ್ಟಿದ್ದಾರೆ ನಿರ್ಮಾಪಕ ಉಮಾಪತಿ.
ದರ್ಶನ್ ಅಭಿನಯದ ರಾಬರ್ಟ್ ಚಿತ್ರ, ಈಗಾಗಲೇ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳಿಂದ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ತರುಣ್ ಸುಧೀರ್, ದರ್ಶನ್ ಮತ್ತು ಉಮಾಪತಿ ಕಾಂಬಿನೇಷನ್‍ನ ಚಿತ್ರ ಬಹುಶಃ 2021ರ ಆರಂಭದಲ್ಲಿ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.