ಕಳೆದ ವರ್ಷ ರಿಲೀಸ್ ಆಗಿ ಬೇರೆಯದೇ ಶೈಲಿಯಲ್ಲಿ ಹಿಟ್ ಆಗಿ ಸಂಚಲನ ಹುಟ್ಟಿಸಿದ್ದ ರೊಮ್ಯಾಂಟಿಕ್ ಸಿನಿಮಾ ಲವ್ ಮಾಕ್`ಟೇಲ್. ಆ ಚಿತ್ರದ ಸೀಕ್ವೆಲ್ ಮಾಡೋಕೆ ನಿರ್ದೇಶಕ ಕೃಷ್ಣ ರೆಡಿಯಿದ್ದರು. ಮಿಲನ ನಾಗರಾಜ್ ಜೊತೆಯಿದ್ದರು. ಈಗ ಕಾಲ ಕೂಡಿ ಬಂದಿದೆ.
ಕೃಷ್ಣ ಮತ್ತು ಮಿಲನ ಇಬ್ಬರೂ ಸೇರಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. ಪಾರ್ಟ್ 2ನಲ್ಲಿಯೂ ಕೃಷ್ಣ ಇರ್ತಾರೆ. ಕೆಲವು ಪಾತ್ರಗಳು ಯಥಾವತ್ ಮುಂದುವರಿಯುತ್ತವೆ. ರೊಮ್ಯಾನ್ಸ್, ಕಾಮಿಡಿ ಹೊಸತನದಿಂದ ಮುಂದುವರಿಯುತ್ತೆ. ಆದರೆ ಕಥೆ ಏನು ಅನ್ನೋದನ್ನು ಮಾತ್ರ ಹೇಳಲ್ಲ ಎನ್ನುತ್ತಾರೆ ಕೃಷ್ಣ.