ಕರ್ನಾಟಕದಲ್ಲಿ ಸಿನಿಮಾಗಳಿಗೆ ಲಾಕ್ ಡೌನ್ ಸಡಿಲಿಕೆ ಮಾಡನಬೇಕು ಎಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಚಿತ್ರಮಂದಿರ ಓಪನ್ ಮಾಡೋದು ಬಿಡಿ, ಚಿತ್ರೀಕರಣಕ್ಕೂ ಅವಕಾಶ ಕೊಟ್ಟಿಲ್ಲ. ಆದರೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿಗಳಲ್ಲಿ ಸಿನಿಮಾಗಳಿಗಿದ್ದ ಕೊರೊನಾ ಲಾಕ್ ಓಪನ್ ಆಗಿದೆ. ಹೀಗಾಗಿ ಕನ್ನಡ ಚಿತ್ರಗಳೂ ಹೈದರಾಬಾದ್‍ನತ್ತ ತಿರುಗಿವೆ.
ಸುದೀಪ್ ಅಭಿನಯದ ಫ್ಯಾಂಟಮ್ ಟೀಂ ಹೈದರಾಬಾದ್`ಗೆ ತೆರಳುತ್ತಿದೆ. ಅದೂ ಎಷ್ಟು ಸೀರಿಯಸ್ ಆಗಿ ಕೊರೊನಾ ರೂಲ್ಸ್ ಫಾಲೋ ಮಾಡ್ತಿದೆ ಅಂದ್ರೆ, ಸಿನಿಮಾ ಟೀಂ ಹೈದರಾಬಾದ್`ಗೆ ತೆರಳಿ ಮೊದಲ ಒಂದು ವಾರ ಸೆಲ್ಫ್ ಕ್ವಾರಂಟೈನ್ ಆಗಲಿದೆ. 40 ಜನಕ್ಕಿಂತ ಕಡಿಮೆ ಟೀಂ, ಶೂಟಿಂಗ್ ಮುಗಿಸಿದ ನಂತರ ತಂಡದವರು ನೇರ ರೂಂಗೆ ಹೋಗಬೇಕು. ಹೊರಗೆ ತೆರಳುವ ಹಾಗಿಲ್ಲ.. ಹೀಗೆ ಹತ್ತಾರು ಕಂಡೀಷನ್ನುಗಳ ನಡುವೆ ಶೂಟಿಂಗ್ ಶುರುವಾಗುತ್ತಿದೆ. ನಟ ಸುದೀಪ್, ತಮಗೆ ತಾವೇ ಮೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ.
ಜೂನ್ 22 ಅಥವಾ 23ರಂದು ಹೈದರಾಬಾದ್‍ಗೆ ತೆರಳುತ್ತೇವೆ. ಜುಲೈ 1ರಿಂದ ಶೂಟಿಂಗ್ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಜ್ಯಾಕ್ ಮಂಜು.