ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಯಶ್, ಪುನೀತ್, ಧ್ರುವ ಸರ್ಜಾ, ಉಪೇಂದ್ರ, ಗಣೇಶ್, ರಕ್ಷಿತ್ ಶೆಟ್ಟಿ, ರವಿಶಂಕರ್, ಇಶಾನ್, ಅಭಿಷೇಕ್ ಅಂಬರೀಷ್, ರಮೇಶ್ ಅರವಿಂದ್, ರಾಕ್‍ಲೈನ್ ವೆಂಕಟೇಶ್, ವಿಜಯ್ ಪ್ರಕಾಶ್, ರವಿಶಂಕರ್, ಸುಮಲತಾ ಅಂಬರೀಷ್ ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಚ್ಚ, ಅಶಿಕಾ ರಂಗನಾಥ್, ಅನುಶ್ರೀ.. ಇವರೆಲ್ಲ ಚಿತ್ರರಂಗದ ತಾರೆಯರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಪಂಕಜ್ ಅಡ್ವಾಣಿ.. ಹೀಗೆ ಇವರೆಲ್ಲ ಸೇರಿದ್ದಾರೆ.
ಅವರಿಗೊಂದು ಚೆಂದದ ಸಂಗೀತದ ಮೂಲಕ ಹಾಡು ಮಾಡಿರುವುದು ವಿ.ಹರಿಕೃಷ್ಣ, ಕಾನ್ಸೆಪ್ಟ್ ಪವನ್ ಒಡೆಯರ್ ಅವರದ್ದಾದರೆ, ಕೊರಿಯೋಗ್ರಫಿ ಮಾಡಿರುವುದು ಇಮ್ರಾನ್ ಸರ್ದಾರಿಯಾ. ರಾಜೇಶ್ ಕೃಷ್ಣ, ಸಂತೋಷ್ ವೆಂಕಿ, ವಿಜಯ್ ಪ್ರಕಾಶ್ ಹಾಡಿದ್ದಾರೆ. ಹಾಡಿಗೆ ಸಾಹಿತ್ಯ ಪ್ರದ್ಯಮ್ಮನ ಅವರದ್ದು. ಡೈಲಾಗ್ ಕೊಟ್ಟಿರೋದು ಪವನ್ ಒಡೆಯರ್, ಗುರು ಕಶ್ಯಪ್, ಹರಿಕೃಷ್ಣ. ಇವರೆಲ್ಲ ಸೇರಿಕೊಂಡು ನಮಿಸಿರುವುದು ಯಾರಿಗೆ ಗೊತ್ತಾ..?
ಕೊರೊನಾ ಯೋಧರಿಗೆ. ಹೌದು, ಈ ಕೊರೊನಾ ಯುದ್ಧದಲ್ಲಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ. ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಹಲವರು ಬದಲಾಗು ನೀ ಬದಲಾಯಿಸು ನೀ ಆಲ್ಬಂನಲ್ಲಿದ್ದಾರೆ.