` ರಮ್ಯಾ Active Again : ಗರ್ಭಿಣಿ ಆನೆಯ ಕೊಲೆಗೆ ಮಿಡಿದ ಪದ್ಮಾವತಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ramy active on social media for kerala elephant tragedy
Ramya

ಸ್ಯಾಂಡಲ್ವುಡ್ ಕ್ವೀನ್, ಮಾಜಿ ಸಂಸದೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮಾಜಿ ಮುಖ್ಯಸ್ಥೆ  ರಮ್ಯಾ ಎಲ್ಲಿದ್ದಾರೆ..? ಹೇಗಿದ್ದಾರೆ..? ಏನು ಮಾಡುತ್ತಿದ್ದಾರೆ..? ಇಂತಹ ಪ್ರಶ್ನೆಗಳಿಗೆ ಮೀಡಿಯಾಗಳ ಬಳಿ ಉತ್ತರ ಇರಲಿಲ್ಲ. ಏಕೆಂದರೆ ರಮ್ಯಾ ಸೋಷಿಯಲ್ ಮೀಡಿಯಾದಿಂದಲೇ ಡಿ-ಆಕ್ಟಿವೇಟ್ ಆಗಿದ್ದರು. ಇತ್ತೀಚೆಗೆ ರಮ್ಯಾ ಅವರ ಟ್ವಿಟ್ಟರ್ ಅಕೌಂಟ್ ಆಕ್ಟಿವೇಟ್ ಆಗಿತ್ತು. ಆದರೆ ನೋ ಟ್ವೀಟ್ಸ್. ಹೀಗೆ ಮೌನವಾಗಿದ್ದ ರಮ್ಯಾ, ಈಗ ಮತ್ತೆ ಆಕ್ಟಿವ್ ಆಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಕೇರಳದಲ್ಲಿ ಗರ್ಭಿಣಿ ಆನೆಗೆ ಹಣ್ಣಿನಲ್ಲಿ ಸಿಡಿಮದ್ದು ತಿನ್ನಿಸಿ ಕೊಂದ ಪ್ರಕರಣ.

ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಶುರುವಾಗಿರುವ ಅಭಿಯಾನದಲ್ಲಿ ಪಾಲ್ಗೊಂಡಿರುವ ರಮ್ಯಾ, ಅದರ ಲಿಂಕ್ನ್ನು ಶೇರ್ ಮಾಡಿದ್ದಾರೆ. ನೀವೆಲ್ಲರೂ ಚೆನ್ನಾಗಿದ್ದೀರಿ, ಆರೋಗ್ಯವಾಗಿದ್ದೀರಿ ಎಂಬ ವಿಶ್ವಾಸ, ನಂಬಿಕೆ ಇದೆ. ದಯವಿಟ್ಟು ಸ್ವಲ್ಪ ಸಮಯ ತೆಗೆದುಕೊಂಡು ಈ ಅರ್ಜಿಗೆ ಸಹಿ ಹಾಕಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ರಮ್ಯಾ ಅಜ್ಞಾತವಾಸ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿವೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery