ರವಿಚಂದ್ರನ್ ಅಂದ್ರೆ ರೊಮ್ಯಾನ್ಸ್ & ಎಂಟರ್‍ಟೈನ್‍ಮೆಂಟ್. ಮನರಂಜನಾತ್ಮಕ ಶೈಲಿಗೇ ಒಗ್ಗಿ ಹೋಗಿರುವ ರವಿಚಂದ್ರನ್, ರೂಲ್ಸ್ ಬ್ರೇಕ್ ಮಾಡಿದ್ದು ಅಪರೂಪ. ಹಾಗೆ ಬ್ರೇಕ್ ಮಾಡಿದ ಚಿತ್ರಗಳೆಂದರೆ ದೃಶ್ಯ ಮತ್ತು ಕುರುಕ್ಷೇತ್ರ. ಎರಡೂ ಗೆದ್ದಿವೆ. ಹೀಗಾಗಿಯೇ ಏನೋ.. ಈ ಬಾರಿ ಐತಿಹಾಸಿಕ ಕಥೆಯತ್ತ ಒಲವು ತೋರಿದ್ದಾರೆ ರವಿಚಂದ್ರನ್.
ರವಿಚಂದ್ರನ್‍ಗೆ ಐತಿಹಾಸಿಕ ಹಿನ್ನೆಲೆಯ ಕಥೆ ಹೇಳಿರುವುದು ಜಟ್ಟ ಗಿರಿರಾಜ್. ಜಟ್ಟ, ಮೈತ್ರಿ, ಅಮರಾವತಿ, ಅದ್ವೈತ.. ಹೀಗೆ ರವಿಚಂದ್ರನ್ ಟ್ರ್ಯಾಕ್‍ಗೆ ವಿರುದ್ಧ ದಿಕ್ಕಿನಲ್ಲಿ ಸೂಕ್ಷ್ಮ ಸಂವೇದಿ ಚಿತ್ರಗಳನ್ನು ಮಾಡಿ ಗೆದ್ದವರು ಜಟ್ಟ ಗಿರಿರಾಜ್.
1857ರ ಸ್ವಾತಂತ್ರ್ಯ ಸಂಗ್ರಾಮ ಕಾಲದ ಕಥೆ ಇದು. ತುಂಬಾ ರಿಸರ್ಚ್ ಮಾಡಿ ಕಥೆ ಸಿದ್ಧ ಮಾಡಿದ್ದೇನೆ. ರವಿಚಂದ್ರನ್ ಅವರಿಗೆ ಕಥೆ ಹೇಳಿದ್ದೇನೆ. ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದಿದ್ದಾರೆ ಗಿರಿರಾಜ್. ರವಿಚಂದ್ರನ್ ಓಕೆ ಎಂದರೆ, ಅದು ರವಿಚಂದ್ರನ್ ವೃತ್ತಿ ಜೀವನದ ಮೊತ್ತ ಮೊದಲ ಐತಿಹಾಸಿಕ ಸಿನಿಮಾ ಆಗಲಿದೆ.