` ಈ ಇಬ್ಬರು ನಟಿಯರ ಅಕೌಂಟ್ ಮೇಲೆ ಹ್ಯಾರ‍್ಸ್ ಕಣ್ಣು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hackers attack manvitha and ashika;s accounts
Manvitha Harish, Ashika

ಇತ್ತೀಚೆಗೆ ತೆಲುಗಿನಲ್ಲಿ ಮಿಂಚುತ್ತಿರುವ ಮಲೆನಾಡಿನ ಹುಡುಗಿ ಪೂಜಾ ಹೆಗ್ಡೆ ಅಕೌಂಟ್ ಹ್ಯಾಕ್ ಆಗಿತ್ತು. ಕಂಗನಾ ರಣಾವತ್, ದೀಪಿಕಾ ಪಡುಕೋಣೆ.. ಹೀಗೆ ಹಲವು ದೊಡ್ಡ ದೊಡ್ಡ ಸ್ಟಾರ್‌ಗಳ ಅಕೌಂಟ್‌ಗಳು ಹ್ಯಾಕ್ ಆಗಿದ್ದವು. ಈಗ ಕನ್ನಡದ ನಟಿಯರ ಮೇಲೂ ಹ್ಯಾರ‍್ಸ್ ಕಣ್ಣು ಬಿದ್ದಿದೆ.

ಹ್ಯಾರ‍್ಸ್ ಕೆಂಗಣ್ಣಿಗೆ ಬಿದ್ದಿರೋ ಆ ಇಬ್ಬರೆಂರೆ ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಮತ್ತು ಟಗರು ಪುಟ್ಟಿ, ಕೆಂಡಸAಪಿಗೆ ಕಿನ್ನರಿ ಮಾನ್ವಿತಾ ಕಾಮತ್. ಇದು ಗೊತ್ತಾಗುತ್ತಿದ್ದಂತೆಯೇ ಇಬ್ಬರೂ ತಮ್ಮ ಅಕೌಂಟ್‌ನ್ನು ಕ್ಲೀನ್ ಮಾಡಿದ್ದಾರೆ. ಅರ್ಥಾತ್, ಹ್ಯಾರ‍್ಸ್ ಅಟ್ಯಾಕ್‌ನಿಂದ ಮುಕ್ತಗೊಳಿಸಿಕೊಂಡಿದ್ದಾರೆ. ಎಲ್ಲವೂ ಸರಿ ಹೋದ ಮೇಲೆ ತಮ್ಮ ಅಭಿಮಾನಿಗಳಿಗೆ, ಫಾಲೋರ‍್ಸ್ಗೆ ಮನವಿ ಮಾಡಿಕೊಂಡಿದ್ದಾರೆ.

`ನಮ್ಮ ಪೇಜ್‌ನಲ್ಲಿ ಬರೋ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಓಪನ್ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.