KGF - CHAPTER 2, 2020ರ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಪ್ರಶಾಂತ್ ನೀಲ್ ಸಿನಿಮಾ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ, ಅಷ್ಟೇ ಅಲ್ಲ, ಕ್ಲೈಮಾಕ್ಸ್ನ್ನೂ ಅವರೇ ಬರೆದುಬಿಟ್ಟಿದ್ದಾರೆ. ಅದಕ್ಕೆಲ್ಲ ಕಾರಣವಾಗಿರೋದು ಚಾಪ್ಟರ್ 1ನಲ್ಲಿ ಬರೋ ಒಂದು ಡೈಲಾಗ್.
ಚಾಪ್ಟರ್ 1ನಲ್ಲಿ ಯಶ್ ಅಲಿಯಾಸ್ ರಾಕಿ ಭಾಯ್ಗೆ ಆತನ ತಾಯಿ ಒಂದು ಮಾತು ಹೇಳ್ತಾಳೆ. ..ನನಗೊಂದು ಮಾತು ಕೊಡು. ಹೇಗೆ ಬದುಕುತ್ತೀಯೋ ಗೊತ್ತಿಲ್ಲ. ಆದರೆ ಸಾಯುವಾಗ ಅತಿ ಪ್ರಬಲನಾಗಿ, ದೊಡ್ಡ ಶ್ರೀಮಂತನಾಗಿ ಸಾಯಬೇಕು ಅನ್ನೋದು ಡೈಲಾಗ್. ಆ ಮಾತಿಗೆ ತಕ್ಕಂತೆಯೇ ಕ್ಲೈಮಾಕ್ಸ್ ಇರುತ್ತೆ ಅನ್ನೋದು ಅಭಿಮಾನಿಗಳ ಚಿತ್ರಕಥೆ.
ಅಭಿಮಾನಿಗಳ ನಿರೀಕ್ಷೆಯನ್ನು ಗೌರಿಶಂಕರದಷ್ಟು ಎತ್ತರಕ್ಕೆ ಏರಿಸಿರೋ ಪ್ರಶಾಂತ್ ನೀಲ್, ಅಭಿಮಾನಿಗಳ ಆ ಎಲ್ಲ ನಿರೀಕ್ಷೆಯನ್ನೂ ಮೀರಿಸುವ ಕ್ಲೈಮಾಕ್ಸ್ ಕೊಟ್ಟಿರ್ತಾರೆ ಅನ್ನೋದ್ರಲ್ಲಿ ನೋ ಡೌಟ್. ಅಭಿಮಾನಿಗಳ ಪ್ರಕಾರ KGF - CHAPTER 2ನಲ್ಲಿ ದುರಂತ ಅಂತ್ಯ ಇರುತ್ತೆ. ಪ್ರಶಾಂತ್ ನೀಲ್ ಅದೇನ್ ಪ್ಲಾನ್ ಮಾಡಿದ್ದಾರೋ..
ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂಸ್, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್.. ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾದ ನಿಜವಾದ ಕ್ಲೈಮಾಕ್ಸ್ ಗೊತ್ತಾಗೋದೇನಿದ್ದರೂ, ಅಕ್ಟೋಬರ್ನಲ್ಲೇ..