ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶೇಷ ಕಾಣಿಕೆ ಸಿಕ್ಕಿದೆ. ಅಂಬಿಯ ಪುತ್ರ ಅಭಿಷೇಕ್ ಹೊಸ ಸಿನಿಮಾ ಬ್ಯಾಡ್ ಮ್ಯಾನರ್ಸ್, ಅಂಬಿ ಸಮಾಧಿಯೆದುರೇ ಶುರುವಾಗಿದೆ. ಚಿತ್ರದ ಪೋಸ್ಟರ್ನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ ಸುಮಲತಾ ಅಂಬರೀಷ್. ಸುಮಲತಾ, ಅಭಿಷೇಕ್, ರಾಕ್ಲೈನ್ ವೆಂಕಟೇಶ್ ಜೊತೆಯಾಗಿ ನಿಂತು ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷ.
ಬ್ಯಾಡ್ ಮ್ಯಾನರ್ಸ್ ಮೇಲೆ ಭಾರಿ ನಿರೀಕ್ಷೆ ಇದೆ. ಮೊದಲ ಸಿನಿಮಾ ಲವ್ ಸ್ಟೋರಿ ಆಗಿತ್ತು. ಇದು ಮಾಸ್ ಸಿನಿಮಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ ಸುಮಲತಾ, ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.
ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಿರ್ಮಾಪಕ ಕೆ.ಎಂ.ಸುಧೀರ್ ನಿರ್ಮಾಪಕ. ಚಿತ್ರದಲ್ಲಿ ಜಾಕಿ ಮಾದರಿಯ ಕಥೆ ಇರಲಿದೆ. ಅಂದರೆ ಜಾಕಿ ಚಿತ್ರದ ಕಥೆಯಷ್ಟೇ ವೇಗ, ಫೋರ್ಸ್ ಚಿತ್ರದಲ್ಲಿರಲಿದೆ ಎಂದಿದ್ದಾರೆ ಸೂರಿ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕ.