ನಿಖಿಲ್ ಕುಮಾರಸ್ವಾಮಿ, ರೇವತಿಯ ಕೈ ಹಿಡಿದು ಒಂದು ತಿಂಗಳು ಕಳೆದೇಹೋಯ್ತು. ಕೊರೊನಾ ಇಲ್ಲದಿದ್ದರೆ ಅದ್ಧೂರಿಯಾಗಿ ಮದುವೆ ಮುಗಿಸಿಕೊಂಡು, ಹನಿಮೂನ್‍ಗಾಗಿ ವಿದೇಶಗಳಲ್ಲಿ ಹಾರಾಡಬೇಕಿದ್ದ ಜೋಡಿ ಹಕ್ಕಿಗಳು ಈಗ ತೋಟದ ಮನೆ ಸೇರಿವೆ.
ಬಿಡದಿಯ ತೋಟದಲ್ಲಿಯೇ ಪತ್ನಿಯೊಂದಿಗೆ ಕಾಲ ಕಳೆಯುತ್ತಿರುವ ನಿಖಿಲ್, ತೋಟದಲ್ಲಿ ರೌಂಡ್ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಪ್ರೀತಿಯ ಪತ್ನಿ ಜೊತೆ ತೋಟದಲ್ಲಿ ಸುತ್ತಾಡುತ್ತಿರುವ ಫೋಟೋ ಹಾಕಿ ಬಿಡದಿಯ ತೋಟದ ಮನೆಯಲ್ಲಿನ ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ ನಿಖಿಲ್.