` ಅಣ್ಣಾವ್ರ ಹಾದಿಯಲ್ಲಿ ಅಣ್ಣಾವ್ರ ಮೊಮ್ಮಗ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yuva rajkumar in annavru way
Yuva Rajkumar

ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳೆಂದರೆ ತಕ್ಷಣ ಕಣ್ಣ ಮುಂದೆ ಬರೋದೇ ಅಣ್ಣಾವ್ರು. ಮಯೂರ, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ, ಕನಕದಾಸ, ಪುರಂದರ ದಾಸ, ಸರ್ವಜ್ಞ, ಕಾಳಿದಾಸ.. ಎಲ್ಲವೂ ಅವರೇ. ಈ ಹಾದಿಯಲ್ಲಿ ಶಿವಣ್ಣ ಒಂದೆರಡು ಪ್ರಯತ್ನ ಮಾಡಿದರಾದರೂ ದೊಡ್ಡಮಟ್ಟದ ಯಶಸ್ಸು ಸಿಗಲಿಲ್ಲ. ಪುನೀತ್ ಆ ಸಾಹಸಕ್ಕೆ ಇದುವರೆಗೂ ಕೈ ಹಾಕಿಲ್ಲ. ಹೀಗಿರುವಾಗ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ಮೊದಲ ಚಿತ್ರದಲ್ಲೇ ಆ  ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ.

ಮೈಸೂರು ಸಂಸ್ಥಾನ, ಬೆಂಗಳೂರು ಸುತ್ತಮುತ್ತಲಿನ ರಾಜಮಹಾರಾಜರು, ಕದಂಬರ ಕಾಲದ ಗರುಡ ಎನ್ನುವ ಸೈನ್ಯದ ತಂಡ. ಇವುಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ನಿರ್ದೇಶಕ ಪುನೀತ್ ರುದ್ರನಾಗ್. ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವ ಹೊಣೆ ಹೊತ್ತಿರುವ ಪುನೀತ್ ರುದ್ರನಾಗ್, ಅದಕ್ಕಾಗಿ ಇತಿಹಾಸಕಾರರಾದ ಅರೇನಹಳ್ಳಿ ಶಿವಕುಮಾರ್, ಧರ್ಮೇಂದ್ರ ಕುಮಾರ್ ಮೊದಲಾದವರನ್ನು ಭೇಟಿ ಮಾಡುತ್ತಿದ್ದಾರೆ. ನಿರ್ದೇಶಕರಾದ ಪ್ರಶಾಂತ್ ನೀಲ್ ಮತ್ತು ಮಫ್ತಿ ಖ್ಯಾತಿಯ ನರ್ತನ್ ಬಳಿ ಸಹನಿರ್ದೇಶಕರಾಗಿದ್ದ ಪುನೀತ್ ರುದ್ರನಾಗ್ ಕೆಜಿಎಫ್‍ನ ಕೆಲವು ವಿಶೇಷ ಪಾತ್ರಗಳ ಸೃಷ್ಟಿಯಲ್ಲಿ ತಮ್ಮ ತಾಕತ್ತು ತೋರಿಸಿದ್ದರು.

ನಾವು ಮಾಡುತ್ತಿರುವುದು ಒಂದು ಐತಿಹಾಸಿಕ ಚಿತ್ರ. ಇದುವರೆಗೂ ಕನ್ನಡದವರಿಗೆ ತಿಳಿಯದೇ ಇರುವ ಒಬ್ಬ ಐತಿಹಾಸಿಕ ವೀರನ ಕಥೆ ಹೇಳಲಿದ್ದೇವೆ ಎಂದಿದ್ದಾರೆ ಪುನೀತ್ ರುದ್ರನಾಗ್. ದೊಡ್ಡ ಜವಾಬ್ದಾರಿಗೆ ಹೆಗಲು ಕೊಡಲು ಹೊರಟಿರುವ ಅವರ ಸಾಹಸಕ್ಕೆ ಶುಭವಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery