ಅಮರ್ ಚಿತ್ರದ ನಂತರ ಅಭಿಷೇಕ್ ಅಂಬರೀಷ್ ಹೊಸ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ಹೊಸ ಸುದ್ದಿಯೇನಲ್ಲ. ಆದರೆ ಈಗ ಇದು ಪಕ್ಕಾ ಸುದ್ದಿ. ಈ ಬಾರಿ ಅಭಿಷೇಕ್ ಅಂಬರೀಷ್ ಸೆನ್ಸೇಷನ್ ಸೃಷ್ಟಿಸೋಕೆ ಹೊರಟಿದ್ದಾರೆ. ಅಮರ್ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿದ್ದ ಅಭಿಯನ್ನು ರಗಡ್ ಲುಕ್‍ಗೆ ತರಲು ರೆಡಿಯಾಗಿರೋದು ದುನಿಯಾ ಸೂರಿ.
ಬ್ಯಾಡ್ ಮ್ಯಾನರ್ಸ್ ಅನ್ನೋದು ಚಿತ್ರದ ಟೈಟಲ್. ಚಿತ್ರದ ನಿರ್ಮಾಪಕ ಕೆ.ಎಂ. ಸುಧೀರ್. ಸೂರಿ ಚಿತ್ರಗಳು ರಾ ಇರ್ತವೆ. ಹೀರೋಯಿಸಂನ್ನೂ ವಿಜೃಂಭಿಸುವ ಸೂರಿ, ಸದ್ಯಕ್ಕೆ ಕಾಗೆ ಬಂಗಾರ ಚಿತ್ರವನ್ನು ಪಕ್ಕಕ್ಕಿಟ್ಟು ಬ್ಯಾಡ್ ಮ್ಯಾನರ್ಸ್ ಕೈಗೆತ್ತಿಕೊಂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜವಾಬ್ದಾರಿ ಹೊತ್ತಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರೋದು ಪಕ್ಕಾ.