ಇನ್ನು ಕೆಲವೇ ದಿನ. ಜೂನ್ 01ರಿಂದ ಟಿವಿಗಳಲ್ಲಿ ಧಾರಾವಾಹಿಗಳ ಪ್ರಸಾರ ಶುರುವಾಗಲಿದೆ. ಇಷ್ಟು ದಿನ ಹಳೆಯ ಸಂಚಿಕೆಗಳನ್ನೇ ನೋಡಿ ನೋಡಿ ಬೇಸತ್ತಿದ್ದ ಜನರಿಗೆ ಜೂನ್ 01ರಿಂದ ಧಾರಾವಾಹಿಗಳ ಹೊಸ ಸಂಚಿಕೆಗಳನ್ನು ನೋಡುವ ಭಾಗ್ಯ. ಮೇ 25ರಿಂದ ಚಿತ್ರೀಕರಣ ಶುರುವಾಗಿದ್ದು, ಪ್ರತಿ ಶೂಟಿಂಗ್ ಸ್ಪಾಟ್‍ನಲ್ಲೂ ಕೊರೊನಾ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.
ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸಿಂಗ್.. ಎಲ್ಲವನ್ನೂ ಫಾಲೋ ಮಾಡುತ್ತಿದ್ದಾರೆ ಕಿರುತೆರೆ ತಂತ್ರಜ್ಞರು ಮತ್ತು ಕಲಾವಿದರು.
ಆದರೆ.. ಸಿನಿಮಾಗಳ ಚಿತ್ರೀಕರಣ ಯಾವಾಗ ಶುರುವಾಗುತ್ತೆ..? ಸದ್ಯಕ್ಕೆ ಸಿನಿಮಾರಂಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮಾತ್ರ. ಉಳಿದಂತೆ ಚಿತ್ರೀಕರಣಕ್ಕಾಗಲೀ, ರಿಲೀಸ್ ಮಾಡೋಕಾಗಲೀ ಪರ್ಮಿಷನ್ ಇಲ್ಲ. ಸರ್ಕಾರ ಈ ತಕ್ಷಣವೇ ಎಲ್ಲದಕ್ಕೂ ಓಕೆ ಎಂದರೂ ಚಿತ್ರೀಕರಣ ಶುರುವಾಗೋಕೆ, ಸಿನಿಮಾಗಳು ರಿಲೀಸ್ ಆಗೋಕೆ ಕನಿಷ್ಠವೆಂದರೂ ಒಂದು ತಿಂಗಳು ಸಮಯ ಬೇಕಾದೀತು.