ಪ್ರತಿ ಹಬ್ಬಕ್ಕೂ ಒಂದೊಂದು ಸ್ಪೆಷಲ್ ಟ್ರೀಟ್‍ಮೆಂಟ್ ಕೊಡುತ್ತಲೇ ಬಂದ ರಾಬರ್ಟ್, ರಂಜಾನ್ ಹಬ್ಬಕ್ಕೆ ವಿಶೇಷ ಪೋಸ್ಟರ್ ಜೊತೆ ಕಿಕ್ ಕೊಟ್ಟಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್ ಮತ್ತು ಉಮಾಪತಿ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಬೇಕಿದ್ದ ಸಿನಿಮಾ ಲಾಕ್ ಡೌನ್ ಮುಕ್ತಿಗೆ ಕಾಯುತ್ತಿದೆ.
ಪೋಸ್ಟರ್ ರಿಲೀಸ್ ಮಾಡಿರುವ ದರ್ಶನ್, ಎಲ್ಲರ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಈ ಚಿತ್ರ ನಿಮ್ಮ ಮಡಿಲು ಸೇರಲಿದೆ. ಮನೆಯಲ್ಲೇ ಇರಿ, ಮನೆಯಲ್ಲಿರುವವರಿಗೆ ಜಾಗೃತವಾಗಿರಿ ಎಂದು ಸಂದೇಶ ನೀಡಿದ್ದಾರೆ.