ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯೂಥ್ ಟ್ರೆಂಡ್ ಹೀರೋ. ಫಿಟ್ ಇರೋ ಬಾಡಿ, ಒಳ್ಳೆಯ ಡೈಲಾಗ್ ಡೆಲಿವರಿ ಜೊತೆಗೆ ಸಖತ್ ಆಕ್ಟಿಂಗ್ ಕೂಡಾ ಜೊತೆಯಾಗಿ ಸ್ಟಾರ್ ಆಗಿರೋ ಧ್ರುವ ಸರ್ಜಾ, ಫೈಟಿಂಗುಗಳಲ್ಲಂತೂ ವ್ಹಾರೆವ್ಹಾ.. ಅದರಲ್ಲೂ ಹಾರಿ ಹಾರಿ ವಿಲನ್‍ಗಳನ್ನು ಚಚ್ಚಿ ಬಿಸಾಕ್ತಾರೆ. ಅಷ್ಟೇ ಅಲ್ಲ, ಡ್ಯೂಪ್ ಇಲ್ಲದೆ ಸ್ಟಂಟ್ ಮಾಡ್ತಾರೆ. ಇಷ್ಟಿದ್ದರೂ ಧ್ರುವ ಸರ್ಜಾಗೊಂದು ಭಯವಿದೆ. ಕೇಳಿದ್ರೆ ಹೌದಾ.. ಎಂದು ಶಾಕ್ ಆಗೋದು ಪಕ್ಕಾ.
ನನಗೆ ಜಿರಳೆ ಅಂದ್ರೆ ಭಯ, ಧ್ರುವಾಗೆ ಹೈಟ್ ಅಂದ್ರೆ ಭಯ. ಭರ್ಜರಿ ಚಿತ್ರದ ಅಜ್ಜಿ ಹೇಳಿದ.. ಹಾಡಿನ ಶೂಟಿಂಗ್‍ಗೆ ಸ್ಲೆವೇನಿಯಾಗೆ ಹೋಗಿದ್ದೆವು. ಅಲ್ಲಿನ ಎತ್ತರದ ಕೋಟೆ ಮೇಲೆ ನಾನು ಆರಾಮಾಗಿ ನಿಂತಿದ್ರೆ, ಧ್ರುವ ನಡುಗ್ತಾ ಇದ್ರು. ನಂಗೆ ಹೈಟ್ ಅಂದ್ರೆ ಆಗಲ್ಲಪ್ಪ ಎಂದಿದ್ರಂತೆ. ಇದೆಲ್ಲವನ್ನೂ ಹೇಳಿಕೊಂಡಿರೋದು ಹರಿಪ್ರಿಯಾ.
ಇತ್ತೀಚೆಗೆ ಧ್ರುವಾಗೆ ಫೋನ್ ಮಾಡಿದ್ದಾಗ ನಿಮ್ಮ ಹೆಂಡತಿ ಪ್ರೇರಣಾ, ವೀಕೆಂಡ್ ಫ್ರೀ ಇರ್ತಾರೆ. ನಂದಿ ಹಿಲ್ಸ್‍ಗೆ ಕರೆದುಕೊಂಡು ಹೋಗು ಎಂದಾಗಲೂ ಧ್ರುವ ರಿಯಾಕ್ಷನ್ ಹಾಗೆಯೇ ಇತ್ತಂತೆ. ತಮಾಷೆಯ ಕಥೆ ಹೇಳಿಕೊಂಡ ಹರಿಪ್ರಿಯಾ, ಧ್ರುವ ಸಿಂಪಲ್ ಹುಡ್ಗ. ಬಂಡಲ್ ಆಫ್ ಟ್ಯಾಲೆಂಟ್ & ಎನರ್ಜಿ ಎಂದಿದ್ದಾರೆ.