ಕೊರೊನಾ ಅನಾಹುತದ ನಡುವೆ ಬಡವರು, ಶ್ರಮಿಕ ವರ್ಗದವರ ನೆರವಿಗೆ ಸರ್ಕಾರವಷ್ಟೇ ಅಲ್ಲ, ನೂರಾರು ಸೆಲಬ್ರಿಟಿಗಳೂ ಮುಂದೆ ಬಂದರು. ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್, ಈ ನಿಟ್ಟಿನಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದೆ. ಈಗಲೂ ಮಾಡುತ್ತಿದೆ.
ಟ್ರಸ್ಟ್ ಮೂಲಕ 15 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದೇವೆ. ಔಷಧಿ ಒದಗಿಸಿದ್ದೇವೆ. ಚಿತ್ರರಂಗದ ಕಾರ್ಮಿಕರು, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರಿಗೆ ನೆರವು ನೀಡಿದ್ದೇವೆ. 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಮೂಲಕವೂ ಸಹಾಯ ಮಾಡಿದ್ದೇವೆ. ಇದು ಇನ್ನೂ ನಡೆಯುತ್ತಿದೆ. ಪ್ರತಿಯೊಂದಕ್ಕೂ ಹಣ ನೀಡಿರುವುದು ಸ್ವತಃ ಸುದೀಪ್ ಎಂದು ಮಾಹಿತಿ ಕೊಟ್ಟಿದ್ದಾರೆ ಟ್ರಸ್ಟ್‍ನ ಕಾರ್ಯದರ್ಶಿ ರಮೇಶ್.
ಆದರೆ ಸುದೀಪ್ ಗ್ರೇಟ್ ಎಂದಿರುವುದು ತಮ್ಮ ಅಭಿಮಾನಿಗಳಿಗೆ. ನನ್ನ ಅಭಿಮಾನಿಗಳು ಕೇವಲ ಸಿನಿಮಾ ರಿಲೀಸ್ ದಿನ ಬಂದು ಹಾರ ಹಾಕಿ, ಪಟಾಕಿ ಸಿಡಿಸಿ ಹೋಗುವವರಲ್ಲ. ಅದು ಈ ಕೊರೊನಾ ಸಂದರ್ಭದಲ್ಲೂ ಸಾಬೀತಾಯಿತು. ನನ್ನ ಅಭಿಮಾನಿಗಳ ಈ ಸೇವೆ ಹೇಳಿಕೊಳ್ಳೋಕೆ ಹೆಮ್ಮೆಯಿದೆ ಎಂದಿದ್ದಾರೆ ಸುದೀಪ್.