ಲವ್ ಮಾಕ್‍ಟೇಲ್ ಮೂಲಕ ಫುಲ್ ಝೂಮ್‍ನಲ್ಲಿರೋ ಮದರಂಗಿ ಕೃಷ್ಣ, ಈಗ ನಾಗಶೇಖರ್ ಜೊತೆ ಹೊಸ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಸಂದೇಶ್ ಬ್ಯಾನರ್‍ನಲ್ಲಿ ರಿಲೀಸ್ ಆಗುತ್ತಿರುವ ಹೊಸ ಚಿತ್ರಕ್ಕೆ ನಾಗಶೇಖರ್ ಡೈರೆಕ್ಟರ್. ಕೃಷ್ಣ ಹೀರೋ.
ಈ ಚಿತ್ರದಲ್ಲಿ ಲವ್ ಕಾಮಿಡಿ ಸ್ಟೋರಿ ಇದೆ. ಟೈಟಲ್ ಫೈನಲ್ ಆಗಿಲ್ಲ ಎಂದಿರೋ ಕೃಷ್ಣ, ನಾಗಶೇಖರ್ ಜೊತೆಗಿನ ಚಿತ್ರದ ಬಗ್ಗೆ ಥ್ರಿಲ್ಲಾಗಿದ್ದಾರೆ. ಅತ್ತ ತಮಿಳು ಚಿತ್ರದ ಕೆಲಸ ಮುಗಿಸಿ ವಾಪಸ್ ಆಗಿರುವ ನಾಗಶೇಖರ್, ಕೃಷ್ಣ ಜೊತೆಗಿನ ಚಿತ್ರದ ಸ್ಕ್ರಿಪ್ಟ್‍ನ್ನು ಫೈನಲ್ ಹಂತಕ್ಕೆ ತಂದಿದ್ದಾರೆ.