ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳು ಹುಚ್ಚಿಗೆ ಬಿದ್ದವರಂತೆ ನೋಡಿದ್ದಾರೆ. ನೋಡುತ್ತಿದ್ದಾರೆ. ಧ್ರುವ ಮತ್ತು ರಶ್ಮಿಕಾ ಅಭಿನಯಿಸುರೋ ಹಾಡು ಹಿಟ್. ಆದರೆ ಜೊತೆ ಜೊತೆಯಲ್ಲೇ ವಿವಾದವೊಂದು ಭುಗಿಲೆದ್ದಿದೆ. ಹಾಡಿನಲ್ಲಿ ತಮಿಳು ಚಿತ್ರವೊಂದರ ಮ್ಯೂಸಿಕ್‍ನ್ನು ಬಳಸಿಕೊಂಡಿದ್ದಾರೆ ಅನ್ನೋ ಅಪವಾದ ಕೇಳಿ ಬಂದಿದೆ. ಇಡೀ ಹಾಡಲ್ಲ, ಹಾಡಿನ ನಡುವಿನ ಒಂದು ಬಿಟ್ಸ್ ಬಗ್ಗೆ ಕಂಪ್ಲೇಂಟು.
ಹಾಡಿನಲ್ಲಿ ಬರುವ ಮ್ಯೂಸಿಕ್ ಬಿಟ್ಸ್ 1997ರಲ್ಲಿ ರಿಲೀಸ್ ಆಗಿದ್ದ ತೆಲುಗಿನ ಪೆಲ್ಲಿ ಚಿತ್ರದಲ್ಲಿ ಬಳಸಲಾಗಿತ್ತು. 1999ರಲ್ಲಿ ತಮಿಳಿನ `ಅವಳ್ ವರುವಳಾ'ದಲ್ಲಿಯೂ ಬಳಸಿಕೊಂಡಿತ್ತು. ಅದಾದ ಮೇಲೆ 2000ದಲ್ಲಿ ಕನ್ನಡದಲ್ಲಿ `ಮದುವೆ' ಚಿತ್ರದಲ್ಲಿಯೂ ಬಳಸಲಾಗಿತ್ತು. ಪಲ್ಲಿಯೇ ತಮಿಳಿನಲ್ಲಿ ಅವಳ್ ವರುವಳಾ ಆಗಿತ್ತು, ಕನ್ನಡದಲ್ಲಿ ಮದುವೆ ಆಗಿತ್ತು. ಎಸ್.ಎ.ರಾಜಕುಮಾರ್ ಮ್ಯೂಸಿಕ್ ಡೈರೆಕ್ಟರ್.
ಆದರೆ ಇದನ್ನು ಚಿತ್ರತಂಡ ನಿರಾಕರಿಸಿದೆ. ಈಗ ಕಾಪಿರೈಟ್ ಆಕ್ಟ್ ತುಂಬಾ ಕಠಿಣವಾಗಿದೆ. ಅದೆಲ್ಲ ಸಾಧ್ಯವಿಲ್ಲ. ಚಿತ್ರದಲ್ಲಿ ಬಳಸಿರುವ ಮ್ಯೂಸಿಕ್ ನಮ್ಮದೇ. ವೊರಿಜಿನಲ್ ಎಂದಿದ್ದಾರೆ ನಿರ್ದೇಶಕ ನಂದಕಿಶೋರ್.
ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಟರ್. ಚಂದನ್ ಶೆಟ್ಟಿಯೇ ಹಾಡಿರುವ ಹಾಡಿದು. ಸಾಹಿತ್ಯವೂ ಅವರದ್ದೇ. ಕೊರೊನಾ ಎಂಡ್ ಆಗುವುದನ್ನೇ ಚಿತ್ರತಂಡ ಕಾಯುತ್ತಿದೆ.