ಸಿಂಪಲ್ ಸುನಿ ವಿಭಿನ್ನ ಕಥೆಗಳಿಗೆ ಹೆಸರುವಾಸಿ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಬಳಿಕ ಅವರು ಕೈಗೆತ್ತಿಕೊಂಡಿದ್ದು ಬಹುಪರಾಕ್ ಚಿತ್ರವನ್ನ. ವಿಭಿನ್ನ ಶೈಲಿಯಲ್ಲಿ ಕಥೆ ಹೇಳುವ ಪ್ರಯೋಗಾತ್ಮಕ ಚಿತ್ರವದು. ಅಷ್ಟೆ ಅಲ್ಲ, ಉಳಿದವರು ಕಂಡಂತೆ ಚಿತ್ರಕ್ಕೆ ಹಣ ಹಾಕಿದ್ದೂ ಅವರೇ. ಹೀಗೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಸಿಂಪಲ್ ಸುನಿ, ಲಾಕ್ ಡೌನ್ ಟೈಂನಲ್ಲಿ ಇನ್ನೊಂದು ವಿಭಿನ್ನ ಪ್ರಯೋಗಾತ್ಮಕ ಕಥೆ ಸಿದ್ಧಪಡಿಸಿದ್ದಾರೆ.
ಇದು ವಿಭಿನ್ನ ಪ್ರಯೋಗ. ಸಂಭಾಷಣೆಗಳಿರುತ್ತವೆ. ಆದರೆ ಪಾತ್ರಧಾರಿಗಳು ಮಾತನಾಡಲ್ಲ. ಮೈಂಡ್ ಟಾಕ್ ಸ್ಟೋರಿ. ಮನಸ್ಸಿನಲ್ಲೇ ಮಾತನಾಡುವ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಕಾಮಿಡಿ ಎಲ್ಲವೂ ಇದೆ. ಲಾಕ್ಡೌನ್ ಟೈಂನಲ್ಲೇ ಹೊಳೆದ ಕಥೆಯ ಮುಖ್ಯಭಾಗವನ್ನು ಬರೆದು ಮುಗಿಸಿದ್ದೇನೆ ಎನ್ನುವ ಸುನಿಗೆ, ಈ ಕಥೆಯನ್ನು ಹೊಸಬರೊಂದಿಗೆ ಮಾಡುವ ಉದ್ದೇಶವಿದೆ.
ಸದ್ಯಕ್ಕೆ ಶರಣ್,ಅಶಿಕಾ ರಂಗನಾಥ್ ಜೋಡಿಯ ಅವತಾರ್ ಪುರುಷ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಇದರ ನಡುವೆ ಗಣೇಶ್ ಜೊತೆಗಿನ ಸಖತ್ ಮುಹೂರ್ತವಾಗಿ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ.