` ರಶ್ಮಿಕಾ ಮಂದಣ್ಣ ಸಿನಿಮಾ ಎಂಟ್ರಿಗೆ ಕಾರಣ, ಅಕ್ಕಿ ಜೊತೆಗಿದ್ದ ಆ ಫೋಟೋ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
photo with akshay kumar helped rashmikaget roles
Rashmika, Akshay Kumar

ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಮೋಸ್ಟ್ ಬ್ಯುಸಿ ಹೀರೋಯಿನ್. ತೆಲುಗಿನಲ್ಲಂತೂ ಆಕೆ ಸದ್ಯಕ್ಕೆ ನಂ.1. ಇಂತಹ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದಿದ್ದು ಹೇಗೆ..? ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಅನ್ನೋದು ಗೊತ್ತು. ಆದರೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಣ್ಣಿಗೆ ಬಿದ್ದಿದ್ದು ಹೇಗೆ..? ಅದಕ್ಕೆಲ್ಲ ಕಾರಣವಾಗಿದ್ದು ಒಂದು ಫೋಟೋ.

2014ರಲ್ಲಿ ಫ್ರೆಶ್ ಫೇಸ್ ಆಫ್ ಇಂಡಿಯಾ ಅನ್ನೋ ಒಂದು ಸ್ಪರ್ಧೆ ನಡೆದಿತ್ತು. ಆಗ ಫ್ರೆಶ್ ಫೇಸ್ ಆಗಿ ಆಯ್ಕೆಯಾಗಿದ್ದವರು ರಶ್ಮಿಕಾ ಮಂದಣ್ಣ. ಹಾಗೆ ಪ್ರಶಸ್ತಿ ಗೆದ್ದ ರಶ್ಮಿಕಾರಿಗೆ ಅವಾರ್ಡ್ ಕೊಟ್ಟಿದ್ದವರು ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ.

ಆ ಫೋಟೋ ನೋಡಿಯೇ ರಕ್ಷಿತ್ ಮತ್ತು ರಿಷಬ್ ರಶ್ಮಿಕಾರನ್ನು ಕಾಂಟ್ಯಾಕ್ಟ್ ಮಾಡಿದ್ದು. ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ ಕೊಟ್ಟಿರೋ ಉತ್ತರ ಇದು.