` ಓಂ 25 : ಚಿತ್ರರಂಗದ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
om celebrates 25 years
Om Movie Image

ಕೊರೊನಾ ಲಾಕ್ ಡೌನ್ ಇಲ್ಲದೇ ಹೋಗಿದ್ದರೆ ಇದೊಂದು ಹಬ್ಬವೇ ಆಗುತ್ತಿತ್ತೇನೋ.. ಹಾಗಿದೆ ಚಿತ್ರರಂಗದ ಸಂಭ್ರಮ. ಓಂ ಚಿತ್ರ ರಿಲೀಸ್ ಆಗಿ 25 ವರ್ಷ ತುಂಬಿದ್ದನ್ನು ಇಡೀ ಚಿತ್ರರಂಗ ಸಂಭ್ರಮಿಸುತ್ತಿರುವ ಪರಿ ನೋಡಿದರೆ.. ಅನುಮಾನವೇ ಇಲ್ಲ.. ಇದು ಓಂ ಹಬ್ಬ.

ಸೋಷಿಯಲ್ ಮೀಡಿಯಾಗಳಲ್ಲಿ ಕಾಮನ್ ಡಿಪಿ ಸೃಷ್ಟಿಸಿಕೊಂಡು, ಷೇರ್ ಮಾಡುತ್ತಾ.. ಓಂ ಚಿತ್ರದ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ ಚಿತ್ರರಂಗದ ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರು. ಅಭಿಮಾನಿಗಳಿಗಂತೂ ಮತ್ತೆ ಮತ್ತೆ ಓಂ ನೋಡಿ ಸಂಭ್ರಮಿಸುವ ತವಕ.

ಇದರ ಜೊತೆ ಶಿವಣ್ಣ ಮತ್ತು ಉಪೇಂದ್ರ ಫೇಸ್‍ಬುಕ್‍ನಲ್ಲಿ ಶಿವರಾಜ್ ಕುಮಾರ್ ಪೇಜ್‍ನಲ್ಲಿ ಜೊತೆ ಜೊತೆಯಾಗಿ ಲೈವ್‍ಗೆ ಬರಲಿದ್ದಾರೆ. ಅದಕ್ಕೂ ಮುನ್ನ ಇನ್‍ಸ್ಟಾಗ್ರಾಂನಲ್ಲಿ ಶಿವಣ್ಣ ಲೈವ್‍ಗೆ ಸಿಗಲಿದ್ದಾರೆ. ಶಿವರಾಜ್ ಕುಮಾರ್, ಪ್ರೇಮಾ ಅಭಿನಯಿಸಿದ್ದ ಚಿತ್ರಕ್ಕೆ ಉಪೇಂದ್ರ ನಿರ್ದೇಶಕ. ಗೌರಿಶಂಕರ್ ಛಾಯಾಗ್ರಹಣ, ಹಂಸಲೇಖ ಸಂಗೀತವಿದ್ದ ಆ ಚಿತ್ರ ಸೃಷ್ಟಿಸಿದ್ದ ಇತಿಹಾಸವನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery