ದುನಿಯಾ ಸೂರಿಯ ದೊಡ್ಡ ಕನಸಿನ ಚಿತ್ರ ಕಾಗೆ ಬಂಗಾರ. ಆ ಕನಸಿನ ಹಾದಿಯಲ್ಲಿ ಕೆಂಡ ಸಂಪಿಗೆ ಸೃಷ್ಟಿಸಿ ಗೆದ್ದಿರೋ ಸೂರಿ, ಕಾಗೆ ಬಂಗಾರ ಯಾವಾಗ ಮಾಡ್ತಾರೆ..? ಆ ನಿರೀಕ್ಷೆಯ ಕಾಲ ಕೂಡಿ ಬರೋ ಸಮಯ ಹತ್ತಿರವಾಗುತ್ತಿದೆ.
ಸೂರಿ ಸರ್ ಈಗ ಅದೇ ಕೆಲಸದಲ್ಲಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್‍ನಲ್ಲಿ ಬ್ಯುಸಿ ಇದ್ರು. ಈಗ ಕಾಗೆ ಬಂಗಾರವೇ ಮುಂದಿನ ಪ್ರಾಜೆಕ್ಟ್ ಎಂದಿದ್ದಾರೆ ಎನ್ನುವ ಪ್ರಶಾಂತ್ ಸಿದ್ಧಿ, ಅವರು ಫೈನಲ್ ಆಗಿ ಹೇಳಿದ್ಮೇಲೇನೆ ನಮ್ಮ ಕೆಲಸ ಎನ್ನುತ್ತಾರೆ.
ಸೂರಿ ಸರ್ ಅವರು ಕಲ್ಲು ತಂದುಕೊಟ್ರೂ ಆಕ್ಟ್ ಮಾಡಿಸ್ತಾರೆ ಎನ್ನುವ ಸಿದ್ಧಿಗೆ, ಸೂರಿ ಅವರಿಂದ ಶ್ರದ್ಧೆ ಕಲಿತಿದ್ದೇನೆ. ಅಲ್ಲಿ ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುತ್ತಾರೆ. ಟೋಟಲ್ಲಾಗಿ ಸಿದ್ಧಿ ಕೂಡಾ ಸೂರಿ ಅವರ ಕಾಗೆ ಬಂಗಾರಕ್ಕೆ ಕಾಯುತ್ತಿದ್ದಾರೆ.