` ಪುನೀತ್ ಚಿತ್ರಗಳು ಡೈರೆಕ್ಟ್ ಮೊಬೈಲ್‍ಗೆ : ಮಲ್ಟಿಪ್ಲೆಕ್ಸ್ ಪ್ರದರ್ಶಕರು ಗರಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rajkumar ott movie image
puneeth rajkumar movie on amazon prime

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನ್ನಡದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಆಯುಷ್ಮಾನ್ ಖುರಾನಾ  ಇಟ್ಟಿರುವ ಹೆಜ್ಜೆಯಲ್ಲಿ ಕನ್ನಡದಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ತಮ್ಮ ಬ್ಯಾನರ್‍ನ ಎರಡು ಚಿತ್ರಗಳನ್ನು ಡೈರೆಕ್ಟ್ ಆಗಿ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲೇ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ಅರ್ಥಾತ್, ಆ ಚಿತ್ರಗಳು ಥಿಯೇಟರಿಗೆ ಬರೋದೆ ಇಲ್ಲ.

Producers Guild of India Justifies Direct Release of Movies On OTT Platforms

ಒಂದು ಸ್ಪಷ್ಟನೆ ತಿಳಿದುಕೊಳ್ಳಿ. ಯುವರತ್ನ, ಜೇಮ್ಸ್ ಚಿತ್ರಗಳು ಥಿಯೇಟರ್‍ಗೇ ಬರ್ತವೆ. ನೋ ಕನ್‍ಫ್ಯೂಷನ್. ಆದರೆ ಪುನೀತ್ ಅವರ ಪಿಆರ್‍ಕೆ ಬ್ಯಾನರ್‍ನಲ್ಲಿ ನಿರ್ಮಿಸಿರುವ ಫ್ರೆಂಚ್ ಬಿರಿಯಾನಿ ಮತ್ತು ಲಾ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಎರಡೂ ಚಿತ್ರಗಳು ನೇರವಾಗಿ ಅಮೇಜಾನ್ ಪ್ರೈಮ್‍ನಲ್ಲಿ ರಿಲೀಸ್ ಆಗುತ್ತಿವೆ.

Do Not To Skip The Theatrical Run: Inox Urge Content Creators

ಪುನೀತ್ ನಿರ್ಧಾರದ ವಿರುದ್ಧ ಪಿವಿಆರ್ ಮತ್ತು ಐನಾಕ್ಸ್ ವಿರೋಧ ವ್ಯಕ್ತಪಡಿಸಿವೆ. ಪುನೀತ್ ಹೆಸರು ಪ್ರಸ್ತಾಪಿಸದೆ, ಚಿತ್ರ ನಿರ್ಮಾಣ ಸಂಸ್ಥೆಯೊಂದು ಚಿತ್ರಮಂದಿರಕ್ಕೆ ಸಿನಿಮಾ ರಿಲೀಸ್ ಮಾಡದೆ ಸಂಪ್ರದಾಯ ಮುರಿದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿವೆ.

ಮೊಬೈಲ್‍ನಲ್ಲೇ ಥಿಯೇಟರ್.. ಒಟಿಟಿ ಮ್ಯಾಜಿಕ್..

ಇದು ಅನಿವಾರ್ಯ. ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೆಜ್ಜೆಯಿಡಬೇಕು. ಪ್ರದರ್ಶಕರ ಬಗ್ಗೆ ನನಗೂ ಅಪಾರ ಗೌರವವಿದೆ. ಆದರೆ, ರಿಯಾಲಿಟಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಇಷ್ಟಕ್ಕೇ ಮುಗಿಯಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery