ಕನ್ನಡದಲ್ಲಿ 4 ವರ್ಷಗಳ ಹಿಂದೆ ತೆರೆಕಂಡು ಸಂಚಲನ ಸೃಷ್ಟಿಸಿದ್ದ ಚಿತ್ರ ರಾಮಾ ರಾಮಾ ರೇ. ಕೇವಲ ಬಾಯಿಮಾತಿನ ಪ್ರಚಾರದಿಂದಲೇ ಹಿಟ್ ಆಗಿದ್ದ ಚಿತ್ರ. ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಚಿತ್ರವನ್ನು ಇಷ್ಟಪಟ್ಟು ಸ್ವತಃ ತಾವೇ ತೆಲುಗಿಗೆ ತೆಗೆದುಕೊಂಡು ಹೋಗಿ ರೀಮೇಕ್ ಮಾಡಿ, ಅಲ್ಲಿಯೂ ಗೆದ್ದಿದ್ದರು.
ಈಗ ಅದೇ ಚಿತ್ರ ಮರಾಠಿಗೆ ಹೋಗುತ್ತಿದೆ. ಲಾಕ್ ಡೌನ್ ಟೈಂನಲ್ಲಿ ಯೂಟ್ಯೂಬ್‍ನಲ್ಲಿ ರಾಮಾ ರಾಮಾ ರೇ ಸಿನಿಮಾ ನೋಡಿದ ಮರಾಠಿ ಚಿತ್ರ ನಿರ್ಮಾಣ ಸಂಸ್ಥೆ, ಚಿತ್ರವನ್ನು ಮೆಚ್ಚಿಕೊಂಡು ಮರಾಠಿಗೆ ರೀಮೇಕ್ ಮಾಡಲು ರೈಟ್ಸ್ ತೆಗೆದುಕೊಂಡಿದೆ.