` ಮುತ್ತಪ್ಪ ರೈ ಮತ್ತು ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Varashudhara Image
Ravi Belegere, Muthappa Rai during Varashudhara launch (PIC KM Veeresh)

ಭೂಗತ ಲೋಕಕ್ಕೂ ಬಣ್ಣದ ಲೋಕಕ್ಕೂ ಬಿಟ್ಟೂ ಬಿಡದ ನಂಟಿದೆ. ಅಂಥಾದ್ದರಲ್ಲಿ ಮುತ್ತಪ್ಪ ರೈ ಭೂಗತ ಲೋಕದಲ್ಲೇ ಡಾನ್ ಆಗಿ ಮೆರೆದಿದ್ದವರು. ದುಬೈನಲ್ಲಿದ್ದುಕೊಂಡೇ ಕರ್ನಾಟಕದ ಭೂಗತ ಜಗತ್ತನ್ನು ಆಳಿದವರು. ಅದೆಲ್ಲವನ್ನೂ ಬಿಟ್ಟು ಅಪ್ಪಟ ಗೃಹಸ್ಥನಾಗಿ, ಉದ್ಯಮಿಯಾಗಿ, ಸಮಾಜಸೇವಕನಾಗಿ ಬೆಳೆದವರು. ಸಹಜವಾಗಿಯೇ ಅವರ ಜೀವನದಲ್ಲಿ ಒಂದ್ ಹತ್ತು ಸಿನಿಮಾಗಳಿಗಾಗುವಷ್ಟು ಕಥೆಗಳಿದ್ದವು. ಮುತ್ತಪ್ಪ ರೈ ಅವರಿಗೂ ಸಿನಿಮಾ ಲೋಕದ ಮೇಲೆ ವಿಶೇಷ ಪ್ರೀತಿಯಿತ್ತು.

Muthappa Rai First Clapped Movie 

ಮುತ್ತಪ್ಪ ರೈ ಅವರ ಜೀವನವನ್ನೇ ಆಧರಿಸಿ ರಾಮ್ ಗೋಪಾಲ್ ವರ್ಮಾ ರೈ ಅನ್ನೋ ಸಿನಿಮಾ ಮಾಡಿದರು. ಹಿಂದಿಯಲ್ಲಿ. ಆ ಚಿತ್ರದಲ್ಲಿ ರೈ ಆಗಿದ್ದವರು ವಿವೇಕ್ ಒಬೇರಾಯ್. ಆದರೆ ಆ ಚಿತ್ರಕ್ಕೆ ಸ್ವತಃ ಮುತ್ತಪ್ಪ ರೈ ಅವರೇ ಬ್ರೇಕ್ ಹಾಕಿಬಿಟ್ಟರು. ಇನ್ನು, ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಕಥೆಯಲ್ಲಿ ಮುತ್ತಪ್ಪ ರೈ ಲೈಫ್ ಸ್ಟೋರಿಯ ನೆರಳಿದೆ ಎನ್ನುವ ಕಥೆಗಳಿವೆ.

ಪತ್ರಕರ್ತ ರವಿಬೆಳಗೆರೆ ಜೊತೆ ವಿಶೇಷ ಬಾಂಧವ್ಯವಿದ್ದ ಮುತ್ತಪ್ಪ ರೈ, ವಾರಸ್ದಾರ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ಕನ್ನಡದಲ್ಲಿ ಮುತ್ತಪ್ಪ ರೈ ಕ್ಲಾಪ್ ಮಾಡಿದ ಮೊದಲ ಸಿನಿಮಾ ವಾರಸ್ದಾರ.

ಅಷ್ಟೇ ಅಲ್ಲ, ಮುತ್ತಪ್ಪ ರೈ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಕಠಾರಿವೀರ ಸುರಸುಂದರಾಂಗಿಯಲ್ಲಿ ಉಪೇಂದ್ರ ಎದುರು ವಿಲನ್ ಆಗಿದ್ದವರು ಮುತ್ತಪ್ಪ ರೈ. ತುಳು ಭಾಷೆಯ ಕಂಚಿಲ್ದಬಾಲೆಯಲ್ಲಿಯೂ ನಟಿಸಿದ್ದರು.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery