Print 
madagaja, mahesh,

User Rating: 5 / 5

Star activeStar activeStar activeStar activeStar active
 
madagaja mahesh gets appreciation from all
Madagaja Mahesh

ಮದಗಜ. ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶಿಸುತ್ತಿರುವ ಸಿನಿಮಾ. ಶ್ರೀಮುರಳಿ ಹೀರೋ ಆಗಿರುವ ಚಿತ್ರ. ಆಶಿಕಾ ರಂಗನಾಥ್ ನಾಯಕಿ. ಈ ಚಿತ್ರಕ್ಕೆ ಮದಗಜ ಟೈಟಲ್ ಕೊಟ್ಟಿದ್ದು ಸ್ವತಃ ದರ್ಶನ್. ದರ್ಶನ್ ಹೀರೋ ಆಗಿ ನಟಿಸಬೇಕಿದ್ದ ಚಿತ್ರಕ್ಕೆ ರಿಜಿಸ್ಟರ್ ಆಗಿದ್ದ ಟೈಟಲ್ ಅದು. ಹೀಗಾಗಿಯೇ ಚಿತ್ರದ ಮೇಲೆ ಲವ್ ಸ್ವಲ್ಪ ಜಾಸ್ತಿಯೇ ಇದೆ.

ಇತ್ತೀಚೆಗೆ ಮದಗಜ ಚಿತ್ರದ ಮೇಕಿಂಗ್‍ನ್ನು ರಾಬರ್ಟ್ ಚಿತ್ರದ ಸೆಟ್ಟಿನಲ್ಲಿ ದರ್ಶನ್ ಮತ್ತು ತರುಣ್ ಸುಧೀರ್ ನೋಡಿದ್ದಾರೆ. ತರುಣ್ ಮೇಕಿಂಗ್‍ನ್ನು ಮೆಚ್ಚಿಕೊಂಡಿದ್ದರೆ, ದರ್ಶನ್ ನಿರ್ದೇಶಕರಿಗೆ ಹೀಗೇ ಕಂಟಿನ್ಯೂ ಮಾಡೋಕೆ ಹೇಳಿ. ಎಲ್ಲೂ ಕಾಂಪ್ರೊಮೈಸ್ ಆಗಬೇಡಿ ಎಂದಿದ್ದಾರೆ.

ಚಿತ್ರ ಶುರುವಾಗುವುದಕ್ಕೂ ಮುನ್ನ ಚಿತ್ರದ ಸ್ಕ್ರಿಪ್ಟ್‍ನ್ನು ಪ್ರಶಾಂತ್ ನೀಲ್ ನೋಡಿದ್ದರು. ಆ್ಯಕ್ಷನ್ ಕಥೆಯ ಸ್ಕ್ರಿಪ್ಟ್ ನೋಡೋದಕ್ಕೆ ಕುತೂಹಲವಿತ್ತು. ನಾನು ಅಂದುಕೊಂಡಿದ್ದಕ್ಕಿಂತ 100% ಚೆನ್ನಾಗಿದೆ ಎಂದಿದ್ದರಂತೆ ಪ್ರಶಾಂತ್. ಇವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಅಷ್ಟೇ ಖುಷಿಯಿಂದ ಹಂಚಿಕೊಂಡಿದ್ದಾರೆ ನಿರ್ದೇಶಕ ಮಹೇಶ್.