` ರಾಮಾಯಣದ ಸೀತೆಗೆ ಶಂಕರ್ ನಾಗ್ ನೆನಪು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
deepika of ramayan fame rmemebrs shankar nag
Deepika

ದೀಪಿಕಾ ಚಿಕ್ಲಿಯಾ. ರಾಮಾಯಣದ ಸೀತೆ. ಕನ್ನಡದಲ್ಲಿ ದೀಪಿಕಾ ನಟಿಸಿದ್ದು ಕೆಲವೇ ಚಿತ್ರಗಳಲ್ಲಿ. ಅಂಬರೀಷ್ ಜೊತೆ ಇಂದ್ರಜಿತ್, ಶಂಕರ್ ನಾಗ್ ಜೊತೆ ಹೊಸ ಜೀವನದಲ್ಲಿ ನಟಿಸಿದ್ದರು. ಎರಡೂ ಚಿತ್ರಗಳು ಸೂಪರ್ ಹಿಟ್. ಆದರೆ ಹೊಸ ಜೀವನ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಶಂಕರ್ ನಾಗ್ ದುರ್ಮರಣಕ್ಕೀಡಾಗಿದ್ದರು. ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ದೀಪಿಕಾ.

ಹೊಸ ಜೀವನ ಚಿತ್ರದ ಲಾಲಿ ಲಾಲಿ ಲಾಲಿ ಜೋ ಹಾಡನ್ನು ಷೇರ್ ಮಾಡಿರುವ ಸೀತಾ ಅರ್ಥಾತ್ ದೀಪಿಕಾ `ಹೊಸ ಜೀವನ ನನ್ನ ಚಿತ್ರ ಜೀವನದ ಮಹತ್ವದ ಸಿನಿಮಾ. ದೊಡ್ಡ ಹಿಟ್ ಚಿತ್ರ. ಆ ಸಿನಿಮಾದ ಲಾಸ್ಟ್ ಶೆಡ್ಯೂಲ್ ಮುಗಿಸಿ ಬಂದವಳಿಗೆ ಶಂಕರ್ ನಾಗ್ ಅಪಘಾತದ ಸುದ್ದಿ ಗೊತ್ತಾಯ್ತು. ಅವರು ಮೃತಪಟ್ಟ ಸುದ್ದಿ ಕೇಳಿ ಶಾಕ್ ಆಗಿದ್ದೆ. ಅದರಿಂದ ಹೊರಬರಲು ತುಂಬಾ ದಿನ ಹಿಡಿಯಿತು ಎಂದು ಬರೆದುಕೊಂಡಿದ್ದಾರೆ.

ಶಂಕರ್ ನಾಗ್ ಜೊತೆ ಒಂದೆರಡು ಕ್ಷಣಗಳನ್ನು ಕಳೆದವರಿಗೂ ಆತ ಕಾಡುತ್ತಾರೆ. ಶಂಕರ್ ವ್ಯಕ್ತಿತ್ವವೇ ಅಂಥದ್ದು. ಅಂಥಾದ್ದರಲ್ಲಿ ಅವರ ಜೊತೆ ನಾಯಕಿಯಾಗಿ ನಟಿಸಿದವರಿಗೆ ಅವರ ನೆನಪು ಕಾಡುವುದು ವಿಶೇಷವೇನಲ್ಲ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery