ಸಖತ್, ಇದು ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಹೊಸ ಸಿನಿಮಾ. ಮುಹೂರ್ತವನ್ನೂ ಮುಗಿಸಿಕೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದು ಚೈನೀಸ್ ವೈರಸ್. ಆದರೆ ಸುನಿ ಸುಮ್ಮನಾಗಲಿಲ್ಲ. ಲಾಕ್ ಡೌನ್ ನಡುವೆ ಇದ್ದ ವಿಡಿಯೋ ಕಾಲ್ ವ್ಯವಸ್ಥೆಯನ್ನೇ ಬಳಸಿಕೊಂಡು ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಬೆನ್ನು ಹತ್ತಿದರು.
ಕೇವಲ ಒಂದು ತಿಂಗಳಲ್ಲೇ 4 ಹಾಡುಗಳ ಟ್ಯೂನ್ ಮುಗಿಸಿದ್ದೇವೆ. ಲಾಕ್ ಡೌನ್ ಇಲ್ಲದೇ ಇದ್ದರೆ, ಇನ್ನೂ ಹೆಚ್ಚು ಸಮಯ ಕೇಳುತ್ತಿತ್ತು. ಒಳ್ಳೆಯ ಟ್ಯೂನ್ಗಾಗಿ ಜ್ಯಾಡಾ ಸ್ಯಾಂಡಿಗೆ ಇನ್ನಿಲ್ಲದಷ್ಟು ಕಾಟ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸುನಿ.
ಭರಾಟೆ ಸುಪ್ರೀತ್ ನಿರ್ಮಾಣದ ಸಖತ್, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶುರುವಾಗಲಿದೆ. ಚಮಕ್ ನಂತರ ಗಣೇಶ್ ಮತ್ತು ಸುನಿ ಮತ್ತೆ ಜೊತೆಯಾಗಿರುವ ಚಿತ್ರವಿದು. ಸುರಭಿ ಸಖತ್ ಹೀರೋಯಿನ್.