ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್, ಉಮಾಪತಿ.. ಮೂವರ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಕಾಟ ಇಲ್ಲದೇ ಇದ್ದಿದ್ದರೆ, ಇಷ್ಟು ಹೊತ್ತಿಗೆ ಥಿಯೇಟರುಗಳಲ್ಲಿ ರಾಬರ್ಟ್ ಬಂದಾಗಿರುತ್ತಿತ್ತು. ಸಿನಿಮಾ ರಿಲೀಸ್ ಮುಂದಕ್ಕೆ ಹೋದರೂ ರಾಬರ್ಟ್ ಕ್ರೇಜ್ ಕಡಿಮೆಯಾಗಿಲ್ಲ. ಕಾರಣ, ದರ್ಶನ್ ಫ್ಯಾನ್ಸ್.
ಇದು ಒಟಿಟಿ ಫ್ಲಾಟ್ ಫಾರ್ಮ್‍ನವರಿಗೂ ಗೊತ್ತು. ಹೀಗಾಗಿಯೇ ಅಮೇಜಾನ್ ಸಂಸ್ಥೆ ರಾಬರ್ಟ್ ನಿರ್ಮಾಪಕರಿಗೆ 70 ಕೋಟಿ ಆಫರ್ ಕೊಟ್ಟಿದ್ದಾರಂತೆ. ಕಂಡೀಷನ್ ಇಷ್ಟೆ, ಥಿಯೇಟರಿಗೆ ಹೋಗುವಂತಿಲ್ಲ.
ಅಮೇಜಾನ್, ನೆಟ್‍ಫ್ಲಿಕ್ಸ್ ಸೇರಿದಂತೆ ಹಲವಾರು ಒಟಿಟಿ ಕಂಪೆನಿಗಳಿಗೆ ದರ್ಶನ್ ಫ್ಯಾನ್ಸ್ ಕ್ರೇಜ್ ಅರಿವಿದೆ. ಚಿತ್ರದ ಮೇಲೆ ಸೃಷ್ಟಿಯಾಗಿರೋ ನಿರೀಕ್ಷೆಯೂ ಗೊತ್ತಾಗಿದೆ. ಅಲ್ಲದೆ ದರ್ಶನ್ ಅವರ ಹಿಂದಿನ ಚಿತ್ರಗಳಾದ ಯಜಮಾನ ಮತ್ತು ಕುರುಕ್ಷೇತ್ರ ಬಿಸಿನೆಸ್ ಎಷ್ಟು ಅನ್ನೋದೂ ಅವುಗಳಿಗೆ ಗೊತ್ತಿದೆ. ಅವರು ಆಫರ್ ಕೊಟ್ಟಿರುವುದು ನಿಜ. ಎಷ್ಟು ಎಂದು ಹೇಳೋಕೆ ಆಗಲ್ಲ. ಆದರೆ, ರಾಬರ್ಟ್ ಥಿಯೇಟರಿನಲ್ಲಿಯೇ ರಿಲೀಸ್ ಆಗಲಿದೆ ಎಂದಿದ್ದಾರೆ ನಿರ್ಮಾಪಕ ಉಮಾಪತಿ.