ರಾಬರ್ಟ್ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಚಿತ್ರತಂಡ ಉತ್ತರವನ್ನೇನೋ ಕೊಟ್ಟಿತ್ತು. ಕೊಟ್ಟ ಮಾತಿನಂತೆ ಹೆಜ್ಜೆಯನ್ನೂ ಇಟ್ಟಿತ್ತು. ಆದರೆ ಎಲ್ಲವನ್ನೂ ಕೊರೊನಾ ನುಂಗಿಹಾಕಿತು. ಈಗ ಲಾಕ್ ಡೌನ್ ಮುಗಿಯುವ ಮುನ್ನವೇ ಮತ್ತೆ ಅಭಿಮಾನಿಗಳು ಕೇಳುತ್ತಿದ್ದಾರೆ ರಾಬರ್ಟ್ ರಿಲೀಸ್ ಯಾವಾಗ..?
ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡೋಕೆ ಸಿನಿಮಾ ರಿಲೀಸ್ ಆಗಲೇಬೇಕು. ಆದರೆ ಏನ್ ಮಾಡೋದು..? ಈ ಹಿಂದೆ ರಾಬರ್ಟ್ ಚಿತ್ರದ ಪ್ರತಿ ಅಪ್‍ಡೇಟ್‍ಗಳನ್ನೂ ಸ್ಪೆಷಲ್ ದಿನಗಳಂದೇ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟಿದೆ ಚಿತ್ರತಂಡ.
ಗುಡ್ ಫ್ರೈಡೇ, ರಾಮನವಮಿ, ಮೇ 1ರ ಕಾರ್ಮಿಕ ದಿನಾಚರಣೆ ಸೇರಿದಂತೆ ಸ್ಪೆಷಲ್ ಸ್ಪೆಷಲ್ ದಿನಗಳನ್ನೇ ಚಿತ್ರದ ಅಪ್‍ಡೇಟ್‍ಗೆ ಸೆಲೆಕ್ಟ್ ಮಾಡಿಕೊಂಡಿತ್ತು ಉಮಾಪತಿ ಮತ್ತು ತರುಣ್ ಸುಧೀರ್ ಜೋಡಿ. ಈಗ ರಿಲೀಸ್ ಸಸ್ಪೆನ್ಸ್.
ಹೌದು, ಒಂದು ಮೂಲದ ಪ್ರಕಾರ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡೋ ಬಗ್ಗೆ ಉಮಾಪತಿ ಯೋಚಿಸುತ್ತಿದ್ದಾರಂತೆ. ಆದರೆ ನಿರ್ಧಾರವೇನೇ ಇದ್ದರೂ, ಲಾಕ್ ಡೌನ್ ಮುಗಿದ ಬಳಿಕ. ಮೊದಲು ಜನ ಸೇಫ್ ಆಗಲಿ. ನಂತರ ಸಿನಿಮಾ ಬಗ್ಗೆ ನೋಡೋಣ ಎಂದಿದ್ದಾರೆ ಉಮಾಪತಿ. ಸದ್ಯಕ್ಕೇನೋ ಇಡೀ ದೇಶ ವಂದೇ ಮಾತರಂ ಜೈ ಹಿಂದ್ ಎನ್ನುತ್ತಿರುವಾಗ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.