` ಜಿಮ್'ನವರಿಗಾಗಿ ದುನಿಯಾ ವಿಜಿ ಮಾಡಿದ ಮನವಿ ಇದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Duniya Vijay Requests Goverment To Permit Gym Opening
Duniya Vijay

ದುನಿಯಾ ವಿಜಯ್ ಪ್ರತಿದಿನ ಜಿಮ್ ಮಾಡುವುದು ಗುಟ್ಟೇನಲ್ಲ. ವರ್ಕೌಟ್ ಪ್ರೇಮಿಯಾಗಿರುವ ದುನಿಯಾ ವಿಜಿ, ಜಿಮ್‍ಗಳನ್ನು ಪುನಾರಂಭಿಸಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮದ್ಯ ಮಾರಾಟಕ್ಕೇ ಅನುಮತಿ ನೀಡಿದ್ದೀರಿ. ಜಿಮ್‍ಗಳಿಗೂ ಅವಕಾಶ ಕೊಡಿ. ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸರ್ ಮೈಂಟೇನ್ ಮಾಡ್ತೇವೆ.. ನೀವು ಹೇಳಿದ್ದಕ್ಕಿಂತಲೂ ಹೆಚ್ಚು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತೇವೆ. ದಯವಿಟ್ಟು ಜಿಮ್‍ಗಳನ್ನು ಓಪನ್ ಮಾಡಿಸಿ ಎನ್ನುವುದು ವಿಜಿ ಮನವಿ.

ಅದಕ್ಕೆ ಕಾರಣವೂ ಇದೆ. ಎಷ್ಟೋ ಜನ ಜಿಮ್ ನಡೆಸುವವರು ಸಾಲ ಸೋಲ ಮಾಡಿ ಜಿಮ್ ಮಾಡಿರುತ್ತಾರೆ. ಅವರ ಕಥೆ ಏನಾಗಬೇಕು ಎನ್ನುವುದು ದುನಿಯಾ ವಿಜಿ ಪ್ರಶ್ನೆ. ದುನಿಯಾ ವಿಜಿ ಮನವಿಯನ್ನು ಸರ್ಕಾರ ಪುರಸ್ಕರಿಸುತ್ತಾ..? ಕಾದು ನೋಡಬೇಕು. ಅಷ್ಟೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery