` ದಿಯಾ ಹೀರೋಗೆ ಅಪ್ಪು ಕೊಟ್ಟ ಅಚ್ಚರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
diya movie hero gets surprise call from puneeth rajkumar
Diya Movie Hero, Puneeth Rajkumar

ದಿಯಾ, ಲಾಕ್ ಡೌನ್ ಮುಂಚೆ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ, ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡದೇ ಹೋದ ಸಿನಿಮಾ. ಚಿತ್ರ, ಚಿತ್ರದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿ, ಬಾಯಿಮಾತಿನ ಪ್ರಚಾರ ಸಿಕ್ಕು ಜನ ಥಿಯೇಟರಿನತ್ತ ಬರುವ ಹೊತ್ತಿಗೆ ಲಾಕ್ ಡೌನ್ ಬಂದಾಗಿತ್ತು. ಪ್ರಚಾರದ ಕೊರತೆಯಿಂದ ಬಳಲಿದ್ದ ದಿಯಾ, ಈಗ ಒಟಿಟಿಯಲ್ಲಿ ಭರ್ಜರಿಯಾಗಿ ಓಡುತ್ತಿದೆ.

ಇದರ ನಡುವೆ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಪೃಥ್ವಿ ಅಂಬಾರ್‍ಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಹ ಅನುಭವವಾಗಿದೆ. ಅದು ಬೇರೇನಲ್ಲ. ಸ್ವತಃ ಪುನೀತ್ ರಾಜ್‍ಕುಮಾರ್ ಫೋನ್ ಮಾಡಿ, ನಿಮ್ಮ ಅಭಿನಯ ಚೆನ್ನಾಗಿದೆ. ನಮ್ಮ ಬ್ಯಾನರ್‍ನ ಮುಂದಿನ ಚಿತ್ರಗಳಲ್ಲಿ ನಿಮಗೊಂದು ಪಾತ್ರ ಇರುತ್ತೆ. ಲಾಕ್ ಡೌನ್ ಮುಗಿದ ನಂತರ ಬಂದು ಭೇಟಿಯಾಗಿ ಎಂದಿದ್ದಾರೆ ಪುನೀತ್.

ಪುನೀತ್ ಅವರೇ ಸ್ವತಃ ಕರೆ ಮಾಡಿ ಅಭಿನಂದಿಸಿರುವುದಕ್ಕೇ ಥ್ರಿಲ್ ಆದ ಪೃಥ್ವಿ, ನಂತರ ಅವರ ಬ್ಯಾನರ್‍ನಲ್ಲಿ ಅವಕಾಶ ಎಂದಿರುವುದು ಇನ್ನಷ್ಟು ಸಂಭ್ರಮ ಹೆಚ್ಚಿಸಿದೆ. ಅವರ ಡ್ಯಾನ್ಸ್‍ಗಳನ್ನು, ಸಾಹಸಗಳನ್ನು ಅನುಕರಣೆ ಮಾಡುತ್ತಲೇ ಬೆಳೆದವನು ನಾನು. ಅಷ್ಟು ದೊಡ್ಡ ಸ್ಟಾರ್ ನನಗೆ ಫೋನ್ ಮಾಡಿ ಅಭಿನಂದಿಸಿದ್ದು ಅವರ ಒಳ್ಳೆಯ ಮತ್ತು ದೊಡ್ಡತನಕ್ಕೆ ಸಾಕ್ಷಿ ಎಂದಿದ್ದಾರೆ ಪೃಥ್ವಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery